ಮಾಜಿ ಸಿಎಂ ಸಿದ್ದರಾಮಯ್ಯ ಬಿಜೆಪಿ ವಿರುದ್ಧ ಮಾಡಿದ ಆರೋಪವೇನು ಗೊತ್ತಾ?

ಶನಿವಾರ, 19 ಮೇ 2018 (06:04 IST)
ಬೆಂಗಳೂರು : ಶಾಸಕ ಆನಂದ್ ಸಿಂಗ್ ಅವರು ಯಾರ ಸಂಪರ್ಕಕ್ಕೂ ಸಿಗದ ಹಿನ್ನಲೆಯಲ್ಲಿ ಇದೀಗ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಶಾಸಕ ಆನಂದ್ ಸಿಂಗ್ ಅವರನ್ನು ಬಿಜೆಪಿಯವರು ಐಟಿ, ಇಡಿ ದಾಳಿ ಬೆದರಿಕೆ ಒಡ್ಡಿ ಅಪಹರಿಸಿದ್ದಾರೆ ಎಂದು ಆರೋಪ ಮಾಡಿದ್ದಾರೆ.


ನಗರದ ಕೆಪಿಸಿಸಿ ಕಚೇರಿಯಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,’ ಆನಂದ್ ಸಿಂಗ್ ಅವರನ್ನು ಅಪಹರಿಸಿ ಕೂಡಿಡಲಾಗಿದೆ. ಆದರೆ ಅವರು ವಿಧಾನಸೌಧಕ್ಕೆ ಬರುವ ವಿಶ್ವಾಸವಿದೆ. ಬಂದರೆ ನಮ್ಮ ಪಕ್ಷಕ್ಕೆ ಬೆಂಬಲಕ್ಕೆ ನೀಡಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.


ಹಾಗೇ ಕಾಂಗ್ರೆಸ್ ಮತ್ತು ಜೆಡಿಎಸ್​ನ ಶಾಸಕರನ್ನು ಸೆಳೆಯಲು ಬಿಜೆಪಿ ಮುಖಂಡರು ಆಮೀಷ ಒಡ್ಡುತ್ತಿದ್ದಾರೆ. ಬಹುಮತ ಸಾಬೀತುಪಡಿಸುವುದ್ಕಾಗಿ ಕಾಂಗ್ರೆಸ್ ಶಾಸಕರನ್ನು ಸೆಳೆಯಲು ಶ್ರೀರಾಮುಲು, ಜನಾರ್ದನ ರೆಡ್ಡಿ ಕರೆ ಮಾಡಿರುವ ಕುರಿತು ನಮ್ಮಲ್ಲಿ ದಾಖಲೆ ಇದೆ. ಇದನ್ನು ಸೂಕ್ತ ಕಾಲದಲ್ಲಿ ಬಿಡುಗಡೆ ಮಾಡಲಾಗುವುದು. ಸುಪ್ರೀಂಕೋರ್ಟ್​ ನಾಳೆ ಬಹುಮತ ಸಾಬೀತಿಗೆ ನೀಡಿದ ಆದೇಶವನ್ನು ಸ್ವಾಗತಿಸಿದ್ದು, ನಾವು ಬಹುಮತ ಪರೀಕ್ಷೆಯಲ್ಲಿ ಜಯ ಗಳಿಸುತ್ತೇವೆ ಎಂದು ಅವರು ತಿಳಿಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ