ಇವತ್ತಿಗೂ ಸರಕಾರಿ ಬಸ್ ಬಾರದ ಊರು ಇದೆ ಎಂದ್ರೆ ನಂಬುತ್ತೀರಾ?

ಶುಕ್ರವಾರ, 18 ಮೇ 2018 (15:49 IST)
ಊರ ಮುಂದೆ ಕೂತಿರುವ ಜನರು, ಬಸ್ ವ್ಯವಸ್ಥೆ ಇಲ್ಲದೆ ನಡೆದುಕೊಂಡು ಬರುತ್ತಿರುವ ಶಾಲಾ ಮಕ್ಕಳು, ಮಹಿಳೆಯರು. ಇಂತದೊಂದು ಸನ್ನಿವೇಶ ಕಂಡು ಬಂದದ್ದು ದಾವಣಗೆರೆ ತಾಲೂಕಿನ ವಿಟ್ಟಲಾಪುರ ಗ್ರಾಮದಲ್ಲಿ, ಕಳೆದ 20-25 ವರ್ಷದಿಂದ ಈ ಊರಿಗೆ ಬಸ್ಸೆ ಬಂದಿಲ್ಲ ಅಂದ್ರೆ ನಂಬಲೇಬೇಕು, ಇಲ್ಲಿ ನಿತ್ಯ 4 ಕಿ. ಮೀ ದೂರ ನಡೆದು ಮಹಿಳೆಯರು ಮಕ್ಕಳು ಬಸ್ಸತ್ತಬೇಕು,  ಒಂದು ವೇಳೆ ಬೇರೆ ಊರಿನಿಂದ ಲೇಟಾಗಿ ರಾತ್ರಿ ಬಂದ್ರೆ ಅವರನ್ನ ಕರೆದುಕೊಂಡು ಬರಲು, ಇಬ್ಬರು ಮೂವರು ಹೋಗುವಂತ ಪರಿಸ್ಥಿತಿ ನಿರ್ಮಾಣವಾಗಿದೆ. ಅಲ್ಲದೆ ಈ ಊರಿಗೆ ಬಸ್ ಬಾರದ ಹಿನ್ನೆಲೆಯಲ್ಲಿ ಹೆಣ್ಣು ಕೊಡಲು ಬೇರೆ ಊರಿನವರು ಹಿಂದೆ ಮುಂದೆ ನೋಡುತ್ತಿದ್ದಾರೆ, ಕೂಡಲೆ ಗ್ರಾಮಕ್ಕೆ ಬಸ್ಸಿನ ವ್ಯವಸ್ಥೆ ಮಾಡಿಕೊಡಿ ಎಂಬುದು ಅಲ್ಲಿನ ಯುವಕರ ಅಳಲು.
 
 ಇನ್ನು ಇಲ್ಲಿ ಮಹಿಳೆಯರು ಮನೆಯಿಂದ ಬೇರೆ ಊರಿಗೆ ಹೋಗೋದನ್ನ ಮರೆತಿದ್ದಾರೆ. ಕೊನೆ ಪಕ್ಷ ದಿನಕ್ಕೆ ಒಂದು ಬಾರಿಯಾದ್ರು ಬಸ್ಸ್ ಬಂದಿದ್ದರೆ ನಾವು ಹೇಗಾದರು ಟೈಮ್ ಅರ್ಜಸ್ಟ್ ಮಾಡಿಕೊಂಡು ಬೇರೆ ಊರಿಗಾದ್ರು ಹೋಗುತ್ತಿದ್ವಿ, ಆದ್ರೆ ಈಗ ನಮ್ಮ ಸಂಬಂಧಿಕರ ಊರನ್ನ ಮರೆತು ಬಿಟ್ಟಿದ್ದೇವೆ. ಅಲ್ಲದೆ ಮಹಿಳೆಯರಿಗೆ ಅಥವಾ ವೃದ್ಧರಿಗೆ ಏನಾದ್ರು ಸಮಸ್ಯೆಯಾದ್ರೆ ಎತ್ತಿನ ಗಾಡಿ ಹೂಡಿಕೊಂಡು ಹೋಗುವಂತ ಪರಿಸ್ಥಿತಿ ನಿರ್ಮಾಣವಾಗಿದ್ದು, ಸಂಬಂಧಪಟ್ಟ ಹಾಗೂ ಚುನಾವಣೆಯಲ್ಲಿ ಭರವಸೆ ನೀಡಿದಂತ ರಾಜಕಾರಣಿಗಳು ಬಸ್ ವ್ಯವಸ್ಥೆ ಕಲ್ಪಿಸಿಕೊಡಬೇಕು ಎಂದು ಮಹಿಳೆಯರು ಅವಲೊತ್ತುಕೊಂಡಿದ್ದಾರೆ.
 
ಒಟ್ಟಾರೆಯಾಗಿ ಈ ಹಳ್ಳಿಗೆ ಕಳೆದ 25 ವರ್ಷದಿಂದ ನಟರಾಜ ಸರ್ವಿಸ್ ಗತಿಯಾಗಿದ್ದು, ತುಂಬಾ ಸಮಸ್ಯೆ ಎದುರಿಸುತ್ತಿದ್ದಾರೆ.  ಇನ್ನಾದರು ಅಧಿಕಾರಿಗಳು ಹಾಗೂ ರಾಜಕಾರಣಿಗಳು ಇತ್ತ ಗಮನ ಹರಿಸಿ ಸೂಕ್ತ ವ್ಯವಸ್ಥೆ ಕಲ್ಪಿಸಿಕೊಡಬೇಕಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ