ತಮಿಳುನಾಡಿಗೆ ಇಂದು ಕರ್ನಾಟಕದ ಬಸ್ ಸಂಚರಿಸಲ್ಲ
ರಾಜ್ಯವ್ಯಾಪೀ ಭಾರೀ ಪ್ರತಿಭಟನೆ ಕಾವು ಜೋರಾಗಿದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ಕೆಎಸ್ ಆರ್ ಟಿಸಿ ಬಸ್ ಸಂಚಾರ ರದ್ದುಗೊಳಿಸಲಾಗಿದೆ. ತಮಿಳುನಾಡಿನಾದ್ಯಂತ ಇಂದು ಸಂಪೂರ್ಣ ಬಂದ್ ವಾತಾವರಣವಿದೆ.
ಇದರಿಂದಾಗಿ ಕರ್ನಾಟಕ-ತಮಿಳುನಾಡು ಗಡಿಯಲ್ಲೂ ಭಾರೀ ಭದ್ರತೆ ಒದಗಿಸಲಾಗಿದೆ. ಅಂಗಡಿ ಮುಂಗಟ್ಟುಗಳನ್ನು ಮುಚ್ಚಲಾಗಿದ್ದು, ರೈಲು, ರಸ್ತೆ ಸಂಚಾರ ವಾಹನಗಳಿಗೂ ಬಂದ್ ಬಿಸಿ ಮುಟ್ಟಿದೆ ಎನ್ನಲಾಗಿದೆ.