ಏಪ್ರಿಲ್ 9ರವರೆಗೆ ಪಾಸಿಟಿವಿಟಿ ದರ ಕಡಿಮೆ ಇತ್ತು. ನಂತರದಲ್ಲಿ ಸರಾಸರಿ ಶೇ.0.3 ನಿಂದ ಶೇ.1.38 ವರೆಗೆ ಹಾಗೂ ಬೆಂಗಳೂರಿನಲ್ಲಿ ಶೇ.0.4ರಿಂದ ಶೇ.2.07 ಕ್ಕೆ ಏರಿಕೆಯಾಗಿದೆ.
ರಾಜ್ಯದಲ್ಲಿ ಈವರೆಗೆ 1686 ಸಕ್ರಿಯ ಪ್ರಕರಣಗಳು ವರದಿಯಾಗಿವೆ. ಆದರೆ, ಕೊರೋನಾದಿಂದ ಯಾವುದೇ ಹೊಸ ಸಾವು ವರದಿಯಾಗಿಲ್ಲ.
ರಾಜ್ಯದಲ್ಲಿನ ಶೇ.98 ರಷ್ಟುಮಂದಿಗೆ ಲಸಿಕೆ ಹಾಕಿದ್ದು, 15 ರಿಂದ 17ನೇ ವರ್ಷದ ಮಕ್ಕಳಿಗೆ 50 ಲಕ್ಷ ಡೋಸ್ ನೀಡಲಾಗಿದೆ. ಶೇ.27 ರಷ್ಟುಜನರು ಮುಂಜಾಗ್ರತಾ ಲಸಿಕೆ (ಬೂಸ್ಟರ್ ಡೋಸ್) ಪಡೆದಿದ್ದಾರೆ.
ರಾಜ್ಯದಲ್ಲಿ 61 ಲಕ್ಷ ಲಸಿಕೆಗಳ ದಾಸ್ತಾನು ಲಭ್ಯವಿದೆ. ಹೀಗಾಗಿ ಯಾರೂ ಸಹ 4ನೇ ಅಲೆ ಬಗ್ಗೆ ಆತಂಕಪಡಬೇಕಾಗಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.