ನೋಡಲು ಬಂದ ಮೊದಲ ಪತ್ನಿಗೆ ದುನಿಯಾ ವಿಜಿ ಹೇಳಿದ್ದೇನು?
ನಿನ್ನೆ ದುನಿಯಾ ವಿಜಯ್ ಮೊದಲ ಪತ್ನಿ ನಾಗರತ್ನ ಜೈಲಿಗೆ ಪತಿಯನ್ನು ನೋಡಲು ಆಗಮಿಸಿದ್ದಾಗ ವಿಜಯ್ ನಿನ್ನ ಮುಖ ನೋಡಲೂ ನನಗೆ ಇಷ್ಟವಿಲ್ಲ ಎಂದು ಚೀಟಿ ಬರೆದು ಸಾಗಹಾಕಿದ್ದಾರೆ ಎನ್ನಲಾಗಿದೆ. ಇನ್ನೊಂದೆಡೆ ವಿಜಿ ಎರಡನೇ ಪತ್ನಿ ಕೀರ್ತಿ ಕಳೆದ ಎರಡು ದಿನಗಳಿಂದ ಯಾರ ಕಣ್ಣಿಗೂ ಕಾಣಿಸಿಕೊಳ್ಳುತ್ತಿಲ್ಲ.
ಮ್ಯಾಜಿಸ್ಟ್ರೇಟ್ ನ್ಯಾಯಾಲಯ ವಿಜಿಗೆ ಜಾಮೀನು ನಿರಾಕರಿಸಿದ ಬೆನ್ನಲ್ಲೇ ಪರಪ್ಪನ ಅಗ್ರಹಾರ ಜೈಲಿನ ತಮ್ಮ ಕೊಠಡಿಯಲ್ಲೇ ಕಣ್ಣೀರು ಹಾಕಿದ್ದರು ಎನ್ನಲಾಗಿದೆ. ಹೇಗಾದರೂ ಮಾಡಿ ಬಂಧ ಮುಕ್ತರಾಗಲು ಪ್ರಯತ್ನ ಮುಂದುವರಿಸಿರುವ ವಿಜಯ್ ಪರ ವಕೀಲರು ಇಂದು ಸೆಷನ್ಸ್ ಕೋರ್ಟ್ ನಲ್ಲಿ ಜಾಮೀ ನಿಗೆ ಅರ್ಜಿ ಸಲ್ಲಿಸಲಿದ್ದಾರೆ.