ಇವನರ್ವ ಎಂದ ಕಲಾವಿದನಿಗೆ ನೋಟಿಸ್ ನೀಡಿದ ಚುನಾವಣಾ ಆಯೋಗ

ಬುಧವಾರ, 4 ಏಪ್ರಿಲ್ 2018 (18:39 IST)
ಯಕ್ಷಗಾನ ದಲ್ಲಿ ರಾಹುಲ್ ಗಾಂಧಿಯ ಇವನರ್ವ ಡೈಲಾಗ್ ಹೇಳಿದ ಕಲಾವಿದನ ವಿರುದ್ಧ ಚುನಾವಣಾ ಆಯೋಗ ನೋಟಿಸ್ ಜಾರಿ ಮಾಡಿದೆ. 
ಕಟೀಲು ಮೇಳದ ಹಾಸ್ಯ ಕಲಾವಿದ ಪೂರ್ಣೇಶ್ ಆಚಾರ್ ಯಕ್ಷಗಾನ ದ ಸಂಭಾಷಣೆ ಸಂದರ್ಭದಲ್ಲಿ ಇವನರ್ವ ಇವನರ್ವ ಎಂದು ರಾಹುಲ್ ಗಾಂಧಿಯನ್ನು ಅನುಕರಣೆ ಮಾಡಿದ್ದು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಸಖತ್ ವೈರಲ್ ಆಗಿತ್ತು. 
 
ಇದಾದ ಕೆಲವೇ ದಿನಗಳಲ್ಲಿ ಬೆಂಗಳೂರು ಮತ್ತು ಮಂಗಳೂರು ಚುನಾವಣೆ ಆಯೋಗದ ಕಚೇರಿಯಿಂದ ಕಟೀಲು ಮೇಳದ ಮುಖ್ಯಸ್ಥರಿಗೆ ಕರೆ ಮಾಡಿ ಪ್ರಕರಣದ ಬಗ್ಗೆ ವಿಚಾರಿಸಿಕೊಂಡಿದ್ದಾರೆ. ಇದೀಗ ಮೂಡಬಿದ್ರೆ ಚುನಾವಣಾ ಕಚೇರಿ ಯಿಂದ ನೋಟಿಸ್ ಹೊರಡಿಸಿದ್ದು,  ಯಕ್ಷಗಾನ ಪ್ರದರ್ಶನವನ್ನು ನಿಲ್ಲಿಸಬೇಕು ಮತ್ತು ಕಲಾವಿದನನ್ನು ಮೇಳದಿಂದ ತೆಗೆಯಬೇಕೆಂದು ಸೂಚನೆ ನೀಡಿದ್ದಾರೆ. 
 
ಚುನಾವಣಾ ಆಯೋಗದ ಕ್ರಮಕ್ಕೆ ಕಲಾವಿದರು ತೀವ್ರ ಖಂಡನೆ ವ್ಯಕ್ತಪಡಿಸಿದ್ದಾರೆ. ಕೇರಳದ ಕಾಸರಗೋಡುವಿನ ‌ಮಾನ್ಯದಲ್ಲಿ ನಡೆದ ಪ್ರದರ್ಶನದ ತುಣುಕಾಗಿದ್ದು ಅಲ್ಲಿ ನೀತಿ ಸಂಹಿತೆ ಅನ್ವಯಿಸೋದಿಲ್ಲ. ಇವನರ್ವ ಪದಕ್ಕೂ ರಾಜಕೀಯಗೂ ಯಾವುದೇ ಸಂಬಂಧ ಇಲ್ಲ. ಹಾಗಾಗಿ ಕಲಾವಿದರ ಮೇಲೆ ಚುನಾವಣಾ ಆಯೋಗ ಪ್ರಹಾರ ನಡೆಸಲು ಮುಂದಾಗಿರೋದು ಸರಿಯಲ್ಲ ಎಂದು ಕಲಾವಿದರು ಖಂಡಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ