ಚುನಾವಣಾ ಆಯೋಗ ದಿನಾಂಕ ಘೋಷಿಸುವ ಮೊದಲೇ ಬಿಜೆಪಿ ಐಟಿ ಸೆಲ್ ಮುಖ್ಯಸ್ಥನಿಂದ ದಿನಾಂಕ ಪ್ರಕಟಣೆ

ಮಂಗಳವಾರ, 27 ಮಾರ್ಚ್ 2018 (13:56 IST)
ಬೆಂಗಳೂರು: ಮೇ 12 ರಂದು ಒಂದೇ ಹಂತದಲ್ಲಿ ರಾಜ್ಯದ 224 ವಿಧಾನಸಭಾ ಕ್ಷೇತ್ರಗಳಿಗೆ ಮತದಾನ ನಡೆಯಲಿದೆ ಎಂದು ವಿಧಾನಸಭಾ ಚುನಾವಣೆಗೆ ಕೇಂದ್ರ ಚುನಾವಣಾ ಆಯೋಗ ಇಂದು ದಿನಾಂಕ ಪ್ರಕಟಿಸಿದ್ದು ಬಹುದಿನದ ಕುತೂಹಲಕ್ಕೆ ತೆರೆ ಎಳಿದಿದ್ದರು. ಆದರೆ ಇಂದು ಚುನಾವಣಾ ಆಯೋಗ ಕರ್ನಾಟಕದ ಚುನಾವಣೆ ದಿನಾಂಕ ಘೋಷಿಸುವ ಮೊದಲೇ ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವೀಯ ಅವರು ತಮ್ಮ ಟ್ವಿಟ್ಟರ್ ನಲ್ಲಿ ಮತದಾನದ ದಿನಾಂಕ ಹಾಗೂ ಫಲಿತಾಂಶದ ದಿನಾಂಕ ಪ್ರಕಟಿಸಿರುವುದು ಎಲ್ಲರಲ್ಲೂ ಕುತೂಹಲ ಮೂಡಿಸಿದೆ.

ಅಮಿತ್ ಮಾಳವೀಯ ಅವರು ಮತದಾನದ ದಿನ ಮೇ 12,ಫಲಿತಾಂಶ ಮೇ 18 ರಂದು ಪ್ರಕಟವಾಗಲಿದೆ ಎಂದು ತಮ್ಮ ಟ್ವೀಟ್ ನಲ್ಲಿ ಹೇಳಿದ್ದಾರೆ.

ಚುನಾವಣಾ ದಿನಾಂಕವನ್ನು ಗೌಪ್ಯವಾಗಿಟ್ಟಿದ್ದರೂ ಚುನಾವಣಾ ಆಯೋಗ ಘೋಷಣೆ ಮಾಡುವುದಕ್ಕಿಂತ ಮುಂಚಿತವಾಗಿಯೇ ಅಮಿತ್ ಮಾಳವೀಯಾಗೆ ಸಿಕಿದ್ದು ಹೇಗೆ ಎಂಬ ಪ್ರಶ್ನೆ ಮೂಡಿದೆ. ಇನ್ನು ತಮ್ಮ ಟ್ವೀಟ್ ಕುರಿತು ಸ್ಪಷ್ಟನೆ ನೀಡಿರುವ ಅಮಿತ್ ಮಾಳವೀಯ, ಸುದ್ದಿ ವಾಹಿನಿಗಳ ಮಾಹಿತಿ ಆಧರಿಸಿ ಈ ಟ್ವೀಟ್ ಮಾಡಿದ್ದಾಗಿ ತಿಳಿಸಿದ್ದಾರೆ. ತಮ್ಮ ಟ್ವೀಟ್ ವಿವಾದಕ್ಕೆ ಎಡೆಮಾಡಿಕೊಡುತ್ತಿದ್ದಂತೆ ಅಮಿತ್ ಮಾಳವೀಯ ಅದನ್ನು ಡಿಲೀಟ್ ಮಾಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ