ಗ್ಯಾರಂಟಿ ಬೆನ್ನಲ್ಲೇ ವಿದ್ಯುತ್ ಹೊಂದಾಣಿಕೆ ಶುಲ್ಕ ಹೆಚ್ಚಳ!
ಭಾನುವಾರ, 4 ಜೂನ್ 2023 (09:45 IST)
ಬೆಸ್ಕಾ ವ್ಯಾಪ್ತಿಯಲ್ಲಿ ಪ್ರತಿ ಯೂನಿಟ್ ಮೇಲೆ ಹೆಚ್ಚುವರಿಯಾಗಿ 51 ಪೈಸೆ ಹೊಂದಾಣಿಕೆ ಶುಲ್ಕವನ್ನು ವಿಧಿಸಲಾಗಿದೆ. ಇದು ಜುಲೈನಿಂದ ಸೆಪ್ಟೆಂಬರ್ವರೆಗೆ ಮಾತ್ರ ಅಕ್ಟೋಬರ್ನಿಂದ ಮತ್ತೆ ಈ ಶುಲ್ಕವನ್ನು ಪರಿಷ್ಕರಣೆ ಮಾಡಲಾಗುತ್ತದೆ.
ಆಗ 50 ಪೈಸೆಗೆ ಈ ಶುಲ್ಕ ಇಳಿಯಲಿದೆ. ಅದೇ ರೀತಿ, ಮೆಸ್ಕಾಂ ವ್ಯಾಪ್ತಿಯಲ್ಲಿ ಪ್ರತಿ ಯೂನಿಟ್ಗೆ ಹೆಚ್ಚುವರಿಯಾಗಿ 47 ಪೈಸೆ, ಚೆಸ್ಕಾಂ ವ್ಯಾಪ್ತಿಯಲ್ಲಿ ಪ್ರತಿ ಯೂನಿಟ್ಗೆ 41 ಪೈಸೆ, ಹೆಸ್ಕಾಂ ವ್ಯಾಪ್ತಿಯಲ್ಲಿ ಪ್ರತಿ ಯೂನಿಟ್ಗೆ 50 ಪೈಸೆ, ಜೆಸ್ಕಾಂ ವ್ಯಾಪ್ತಿಯಲ್ಲಿ 34 ಪೈಸೆ ಹೆಚ್ಚಳ ಮಾಡಲಾಗಿದೆ.
ಗೃಹಜ್ಯೋತಿ ಯೋಜನೆಗೂ ಇದಕ್ಕೂ ಸಂಬಂಧವಿಲ್ಲ. ಕಲ್ಲಿದ್ದಲು ಖರೀದಿಯ ವೆಚ್ಚವನ್ನು ಹೊಂದಾಣಿಕೆ ಮಾಡಲಾಗಿದೆ ಅಷ್ಟೇ ಗೃಹಜ್ಯೋತಿ ಫಲಾನುಭವಿಗಳ ಮೇಲೆ ಇದು ಪರಿಣಾಮ ಕೂಡ ಬೀರಲ್ಲ ಎಂದು ಇಂಧನ ಇಲಾಖೆ ಸ್ಪಷ್ಟಪಡಿಸಿದೆ.