ಬೆಂಗಳೂರು : ಗೃಹಜ್ಯೋತಿ ಯೋಜನೆಯಲ್ಲಿ 200 ಯೂನಿಟ್ ಫ್ರೀ ಕರೆಂಟ್ ಸಿಗುತ್ತದೆ ಎಂದು ರಾಜ್ಯದ ಜನರು ಸಂತಸಪಟ್ಟರೆ ಕೆಲವೆಡೆ ವಿದ್ಯುತ್ ಬಿಲ್ ಅನ್ನು ದುಪ್ಪಟ್ಟು ಮಾಡಿ ಶಾಕ್ ನೀಡಲಾಗಿದೆ.
ಕರೆಂಟ್ ಬಿಲ್ ದರ ಏರಿಕೆ ಬೆನ್ನಲ್ಲೇ ಅಬಕಾರಿ ಇಲಾಖೆಯಿಂದ ಮದ್ಯ ಪ್ರಿಯರಿಗೆ ಮತ್ತೊಂದು ಶಾಕ್ ನೀಡಿದೆ. ಅಬಕಾರಿ ಇಲಾಖೆ ಸದ್ದಿಲ್ಲದೆ ಮದ್ಯ ಬೆಲೆ ಏರಿಕೆ ಮಾಡಿದೆ. ಸ್ಲಾಬ್ಗಳಲ್ಲಿ ಏರಿಕೆ ಮಾಡಲಾಗಿದ್ದು, ಬಿಯರ್ಗೆ 10 ರೂ. ಏರಿಕೆ ಮಾಡಲಾಗಿದೆ. ಹಾಗೂ ಹಾಟ್ ಡ್ರಿಂಕ್ಸ್ಗಳ ವಿವಿಧ ಬ್ರ್ಯಾಂಡ್ಗಳಿಗೆ ಬೇರೆ ಬೇರೆ ರೀತಿಯಾಗಿ ಬೆಲೆ ಏರಿಕೆ ಮಾಡಲಾಗಿದೆ.