ರಫ್ತಿನ ಮೇಲಿನ ನಿರ್ಬಂಧ ವಿಸ್ತರಣೆ

ಭಾನುವಾರ, 30 ಅಕ್ಟೋಬರ್ 2022 (09:28 IST)
ನವದೆಹಲಿ : ಭಾರತವು ಸಕ್ಕರೆ ರಫ್ತಿನ ಮೇಲಿನ ನಿರ್ಬಂಧಗಳನ್ನು 2023ರ ಅ.31 ರವರೆಗೆ ವಿಸ್ತರಿಸಿದೆ ಎಂದು ಡೈರಕ್ಟರೇಟ್ ಜನರಲ್ ಆಫ್ ಫಾರಿನ್ ಟ್ರೇಡ್ ಅಧಿಸೂಚನೆ ನೀಡಿದೆ.

ಆರಂಭದಲ್ಲಿ, ಈ ವರ್ಷದ ಜೂನ್ 1 ರಿಂದ ಅಕ್ಟೋಬರ್ 31 ರವರೆಗೆ ನಿರ್ಬಂಧಗಳನ್ನು ವಿಧಿಸಲಾಗಿತ್ತು.

ಆದರೆ ಸಿಎಕ್ಸ್ಎಲ್ ಹಾಗೂ ಟಿಆರ್ಕ್ಯೂ ಕೋಟಾದ ಅಡಿಯಲ್ಲಿ ಯುರೋಪಿಯನ್ ಯೂನಿಯನ್ಗೆ ಸಕ್ಕರೆಯ ಈ ನಿರ್ಬಂಧವು ಅನ್ವಯಿಸುವುದಿಲ್ಲ ಎಂದು ಡಿಜಿಎಫ್ಟಿ ಸೂಚಿಸಿದೆ.

ಇನ್ನೆರಡೂ ದಿನಗಳಲ್ಲಿ ರಫ್ತು ನಿರ್ಬಂಧ ಮುಗಿಯುವ ಹಿನ್ನೆಲೆಯಲ್ಲಿ ಈ ನಿರ್ಧಾರವನ್ನು ಮತ್ತೆ ತೆಗೆದುಕೊಂಡಿರುವ ಸರ್ಕಾರ ರಫ್ತಿಗೆ ಸಂಬಂಧಿಸಿದ ಇಲಾಖೆಯಿಂದ ಕಡ್ಡಾಯ ಅನುಮತಿಯಂತಹ ಇತರ ಷರತ್ತುಗಳು ಬದಲಾಗದೇ ಉಳಿಯುತ್ತವೆ ಎಂದು ತಿಳಿಸಿದೆ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ