ದೇಶದಲ್ಲಿ ಕೊರನಾ 4ನೇ ಅಲೆ ಭೀತಿ ಎದುರಾಗಿದೆ. ಈ ಬೆನ್ನಲ್ಲೇ ಹಲವು ರಾಜ್ಯಗಳನ್ನು ಕೊರೋನಾ ಗೈಡ್ಲೈನ್ಸ್ ಜಾರಿಗೊಳಿಸಿವೆ.
ಈ ನಡುವೆ ಪೆಟ್ರೋಲ್ ಬೆಲೆ 100ರ ಗಡಿದಾಟಿ 110 ರೂಪಾಯಿಗಳನ್ನೂ ಮುಟ್ಟಿದೆ. ಡೀಸೆಲ್ ದರ ಕೂಡ ಇನ್ನೇನು ರೂ. 100 ಮುಟ್ಟಲು ಸಿದ್ಧವಾಗಿದೆ.
ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಹೆಚ್ಚಿದಂತೆಲ್ಲಾ ಎಲ್ಲಾ ವಸ್ತುಗಳ ಬೆಲೆಯೂ ಏರಿಕೆಯಾಗುತ್ತವೆ. ಇದರಿಂದ ಸಾಮಾನ್ಯ ಬಡ ಮತ್ತು ಮಧ್ಯಮವರ್ಗದ ಜನರ ಜೀವನ ದುಸ್ಥರವಾಗುತ್ತದೆ.
ಇಂದು, ಏಪ್ರಿಲ್ 29, ಶನಿವಾರದಂದು ಚಿಕ್ಕಬಳ್ಳಾಪುರ, ದಕ್ಷಿಣ ಕನ್ನಡ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಪೆಟ್ರೋಲ್ ಹಾಗೂ ಡಿಸೇಲ್ ಬೆಲೆ ಇಳಿಕೆಯಾಗಿದೆ. ಶಿವಮೊಗ್ಗ ಹಾಗೂ ಉತ್ತರ ಕನ್ನಡ ಜಿಲ್ಲೆಗಳಲ್ಲಿ ಪೆಟ್ರೋಲ್ ಬೆಲೆಯಲ್ಲಿ ಏರಿಕೆಯಾಗಿದೆ. ವಾಹನ ಇಂಧನದ ಬೆಲೆಗಳು ಹಲವಾರು ತಿಂಗಳುಗಳಲ್ಲಿ ಸಾರ್ವಕಾಲಿಕ ಗರಿಷ್ಠ ಮಟ್ಟದಲ್ಲಿವೆ ಮತ್ತು ದೇಶಾದ್ಯಂತ ದಾಖಲೆಯ ಹಣದುಬ್ಬರದ ನಡುವೆ ಕಾರ್ಯನಿರ್ವಹಿಸುತ್ತಿವೆ.
ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಅನೇಕ ಅಂಶಗಳನ್ನು ಅವಲಂಬಿಸಿ ರಾಜ್ಯದಿಂದ ರಾಜ್ಯಕ್ಕೆ ಬದಲಾಗುತ್ತವೆ. ಇವುಗಳಲ್ಲಿ ಕೆಲವು ಅಂತಾರಾಷ್ಟ್ರೀಯ ಕಚ್ಚಾ ತೈಲ ಬೆಲೆಗಳಲ್ಲಿ ದೈನಂದಿನ ಬದಲಾವಣೆಗಳು ಮತ್ತು ವಿದೇಶಿ ವಿನಿಮಯ ಏರಿಳಿತಗಳು ಮತ್ತು ವಿವಿಧ ರಾಜ್ಯಗಳಲ್ಲಿ ವಿಭಿನ್ನ ತೆರಿಗೆ ದರಗಳನ್ನು ಒಳಗೊಂಡಿವೆ.
ದೇಶದಾದ್ಯಂತ ಇಂಧನ ಬೆಲೆಗಳು ಬದಲಾಗುತ್ತಿರುವುದಕ್ಕೆ ಸಾರಿಗೆ ವೆಚ್ಚವೂ ಒಂದು ಪ್ರಮುಖ ಕಾರಣ. ನಮ್ಮ ರಾಜ್ಯದ ಪ್ರತೀ ಜಿಲ್ಲೆಯ ಪೆಟ್ರೋಲ್ - ಡೀಸೆಲ್ ಇಂದಿನ ದರ ಈ ಕೆಳಗಿದೆ.