ಇನ್ಮುಂದೆ ಬೆಂಗಳೂರಿನಿಂದ ಹಾಂಕಾಂಗ್‍ಗೆ ತೆರಳುವುದು ಇನ್ನೂ ಸುಲಭ

ಶನಿವಾರ, 3 ಸೆಪ್ಟಂಬರ್ 2022 (09:34 IST)
ಬೆಂಗಳೂರು : ಹಾಂಕಾಂಗ್ನೊಂದಿಗೆ ಉತ್ತಮ ವ್ಯಾವಹಾರಿಕ ಬಾಂಧವ್ಯ ಹೊಂದುವ ಉದ್ದೇಶದಿಂದ ಇದೇ ಅಕ್ಟೋಬರ್ 11 ರಿಂದ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹಾಂಕಾಂಗ್ಗೆ ನೇರ ವಿಮಾನ ಸಂಪರ್ಕ ಪುನರಾರಂಭಿಸಲಾಗುತ್ತಿದ್ದು, ಕ್ಯಾಥೆ ಪೆಸಿಫಿಕ್ ವಿಮಾನವು ಹಾರಾಟ ನಡೆಸಲಿದೆ.

ಈ ಬಗ್ಗೆ ಮಾಹಿತಿ ಹಂಚಿಕೊಂಡ ಬಿಐಎಎಲ್ನ ಮುಖ್ಯ ಕಾರ್ಯತಂತ್ರ ಅಧಿಕಾರಿ ಸತ್ಯಕಿ ರಘುನಾಥ್, ಬೆಂಗಳೂರು ವಿಮಾನ ನಿಲ್ದಾಣವೂ ದೇಶದ ಅತಿದೊಡ್ಡ ವಿಮಾನ ನಿಲ್ದಾಣಗಳಲ್ಲಿ ಒಂದಾಗಿದೆ.

ವಿಶ್ವದ 8 ಪತಿಷ್ಠಿತ ವಿಮಾನ ಸಂಸ್ಥೆಗಳು ಬೆಂಗಳೂರು ವಿಮಾನ ನಿಲ್ದಾಣವನ್ನು ದಕ್ಷಿಣ ಭಾರತದ ಗೇಟ್ವೇ ಎಂದೇ ಪರಿಗಣಿಸಿವೆ. ಇದರ ಹೆಮ್ಮೆಯ ಭಾಗವಾಗಿ ಇದೀಗ ಹಾಂಕಾಂಗ್ಗೆ ನೇರವಾಗಿ ವಿಮಾನ ಹಾರಟವನ್ನು ಪ್ರಾರಂಭಿಸುತ್ತಿರುವುದು ಖುಷಿ ನೀಡಿದೆ ಎಂದರು.

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ