ವಿಶ್ವದ ಅತಿ ದೊಡ್ಡ ಸೂಪರ್‌ಜಂಬೋ ವಿಮಾನ ಬೆಂಗಳೂರಲ್ಲಿ ಲ್ಯಾಂಡ್‌?

ಗುರುವಾರ, 18 ಆಗಸ್ಟ್ 2022 (08:48 IST)
ಬೆಂಗಳೂರು : ವಿಶ್ವದ ಅತಿ ದೊಡ್ಡ ವಿಮಾನ ಏರ್ಬಸ್ ಎ380 ಸೂಪರ್ಜಂಬೋ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆಗಲಿದೆ.

ಯುಎಇ ವಿಮಾನಯಾನ ಸಂಸ್ಥೆ ಎಮಿರೇಟ್ಸ್ ತನ್ನ ಹೇಳಿಕೆಯನ್ನು ಬಿಡುಗಡೆ ಮಾಡಿ, ಅಕ್ಟೋಬರ್ 30 ರಿಂದ ಪ್ರತಿನಿತ್ಯ ಬೆಂಗಳೂರಿನಿಂದ ದುಬೈಗೆ ಸೇವೆ ನೀಡಲಾಗುವುದು ಎಂದು ತಿಳಿಸಿದೆ.

ಎಮಿರೇಟ್ಸ್ ಸಂಸ್ಥೆಯ ಏರ್ಬಸ್ ಎ380 ವಿಮಾನ ಲ್ಯಾಂಡ್ ಆಗುವ ಎರಡನೇ ನಿಲ್ದಾಣ ಬೆಂಗಳೂರು ಆಗಲಿದೆ. ಈ ಮೊದಲು 2014ರಲ್ಲಿ ಎಮಿರೇಟ್ಸ್ ಸಂಸ್ಥೆ ಮುಂಬೈನಿಂದ ದುಬೈಗೆ ಈ ಸೇವೆಯನ್ನು ನೀಡಿತ್ತು.

ಈ ಡಬ್ಬಲ್ ಡೆಕ್ಕರ್ ವಿಮಾನದಲ್ಲಿ ಮೂರು ದರ್ಜೆಯಲ್ಲಿ ಪ್ರಯಾಣಿಕರು ಪ್ರಯಾಣ ಮಾಡಬಹುದಾಗಿದೆ. ಎಕಾನಮಿ, ಬಿಸಿನೆಸ್, ಫಸ್ಟ್ ಕ್ಲಾಸ್ ಟಿಕೆಟ್ ಲಭ್ಯವಿದೆ.

ಬೋಯಿಂಗ್ 777 ಹೋಲಿಕೆ ಮಾಡಿದರೆ ಶೇ.45 ರಷ್ಟು ಹೆಚ್ಚು ಪ್ರಯಾಣಿಕರು ಈ ವಿಮಾನದಲ್ಲಿ  ಪ್ರಯಾಣಿಸಬಹುದಾಗಿದೆ.  ವಿಶ್ವದ 30 ವಿಮಾನ ನಿಲ್ದಾಣಗಳಿಗೆ ಏರ್ಬಸ್ 380 ವಿಮಾನ ಸೇವೆಯನ್ನು ಎಮಿರೇಟ್ಸ್ ನೀಡುತ್ತಿದೆ. 1985ರಿಂದ ಎಮಿರೇಟ್ಸ್ ಭಾರತದಲ್ಲಿ ಸೇವೆ ನೀಡಲು ಆರಂಭಿಸಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ