ನಮ್ಮ ಮೆಟ್ರೋ ಪ್ರಯಾಣಿಕರಿಗೆ ಸಿಹಿ ಸುದ್ದಿ

ಬುಧವಾರ, 6 ಸೆಪ್ಟಂಬರ್ 2023 (07:49 IST)
ಬೆಂಗಳೂರು : ನಮ್ಮ ಮೆಟ್ರೋ ರೈಲು ಪ್ರಯಾಣಿಕರಿಗೆ ಸಿಹಿ ಸುದ್ದಿಯೊಂದನ್ನು ಬೆಂಗಳೂರು ಆಟೋ ರಿಕ್ಷಾ ಚಾಲಕರ ಒಕ್ಕೂಟ ನೀಡಿದೆ. ನಿಲ್ದಾಣದಿಂದ ಹೊರ ಬಂದ್ಮೇಲೆ ಕರೆದಲ್ಲಿ ಆಟೋ ಚಾಲಕರು ಬರುವುದಿಲ್ಲ. ಸಮಸ್ಯೆಗಳೇ ಹೆಚ್ಚಾಗಿದೆ ಎನ್ನುತ್ತಿದ್ದ ಬೆಂಗಳೂರಿಗರಿಗೆ ಒಂದು ಗುಡ್ ನ್ಯೂಸ್ ಕೊಟ್ಟಿದ್ದಾರೆ.

ಮೆಟ್ರೋ ನಿಲ್ದಾಣಗಳಿಂದ ನಾವು ತಲುಪುವ ಸ್ಥಳಗಳಿಗೆ ಹೋಗಲು ಸಮಸ್ಯೆಯಾಗುತ್ತಿದೆ. ಆಟೋ ಚಾಲಕರು ನಾವು ಕರೆದ ಕಡೆ ಬರಲ್ಲ. ಹೆಚ್ಚಿಗೆ ಹಣ ಪೀಕುತ್ತಿದ್ದಾರೆ ಎನ್ನುವುದು ಮೆಟ್ರೋ ಪ್ರಯಾಣಿಕರ ದೂರುಗಳಾಗಿತ್ತು. ಇದಕ್ಕೆ ಸ್ವತಃ ಆಟೋ ಚಾಲಕರೇ ಪರಿಹಾರವನ್ನ ಒದಗಿಸುತ್ತಿದ್ದಾರೆ. ಅದೇ ಈ ‘ಮೆಟ್ರೋ ಮಿತ್ರ’ ಅಪ್ಲಿಕೇಷನ್.

ಇದರ ಮೂಲಕ ಕೊನೆಯ ಮೆಟ್ರೋ ನಿಲ್ದಾಣ/ಸ್ಥಳಗಳಿಗೂ ಸಂಪರ್ಕ ಕಲ್ಪಿಸುತ್ತವೆ. ‘ನಮ್ಮ ಯಾತ್ರಿ’ ಆನ್ಲೈನ್ ಆಟೋ ರಿಕ್ಷಾ ಬುಕ್ಕಿಂಗ್ ಅಪ್ಲಿಕೇಶನ್ ಈಗಾಗಲೇ ಯಶಸ್ವಿಯಾಗಿದೆ. ಇದಾದ ಬಳಿಕ ‘ಮೆಟ್ರೋ ಮಿತ್ರ’ ಆ್ಯಪ್ ಅನ್ನು ವಿವಿಧ ಪ್ರದೇಶಗಳಿಗೆ ಮತ್ತು ಮೆಟ್ರೋ ನಿಲ್ದಾಣಗಳಿಗೆ ಸಂಪರ್ಕ ಕಲ್ಪಿಸಲೆಂದೇ ರಚನೆ ಮಾಡಲಾಗಿದೆ. ಈ ಆಪ್ ಬುಧವಾರ ಲೋಕಾರ್ಪಣೆಗೊಳ್ಳುವ ಮೂಲಕ ಸಾರ್ವಜನಿಕ ಬಳಕೆಗೆ ಮುಕ್ತವಾಗಲಿದೆ.

ರಾಜ್ಯ ಸರ್ಕಾರ ನಿಗದಿಪಡಿಸಿರುವ ಮೀಟರ್ ದರದ ಜೊತೆಗೆ 10 ರೂಪಾಯಿ ಹೆಚ್ಚುವರಿ ಹಣವನ್ನು ತಂತ್ರಜ್ಞಾನ ನಿರ್ವಹಣೆಗೆ ವಿಧಿಸಲಾಗಿದೆ ಎಂದು ಯೂನಿಯನ್ ತಿಳಿಸಿದೆ. ಇದೇ ಬುಧವಾರ ಜಯನಗರ ಮೆಟ್ರೋ ನಿಲ್ದಾಣದಲ್ಲಿ ಅಧಿಕೃತ ಆ್ಯಪ್ ಅನಾವರಣವಾಗಲಿದೆ. ಮೆಟ್ರೋ ಮಿತ್ರವು ಮೆಟ್ರೋ ಬಳಕೆದಾರರಿಗೆ ಮಾತ್ರ. ಸದ್ಯ ಜಯನಗರ ಮತ್ತು ಆರ್ವಿ ರಸ್ತೆ ನಿಲ್ದಾಣಗಳಲ್ಲಿ ಮೆಟ್ರೋ ಮಿತ್ರ ಪ್ರಾಯೋಗಿಕ ಪರೀಕ್ಷೆ ನಡೆಸಲಾಗುತ್ತೆ ಎಂದು ‘ಪಬ್ಲಿಕ್ ಟಿವಿ’ಗೆ ಎಆರ್ಡಿಯು ಪ್ರಧಾನ ಕಾರ್ಯದರ್ಶಿ ರುದ್ರಮೂರ್ತಿ ತಿಳಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ