ಪೊಲೀಸ್ ಆಕಾಂಕ್ಷಿಗಳಿಗೆ ಗುಡ್ ನ್ಯೂಸ್

ಶುಕ್ರವಾರ, 4 ನವೆಂಬರ್ 2022 (08:33 IST)
ಬೆಂಗಳೂರು: ಪೊಲೀಸ್ ಆಕಾಂಕ್ಷಿಗಳಿಗೆ ಗುಡ್ ನ್ಯೂಸ್. ಆಕಾಂಕ್ಷಿಗಳ ಮನವಿಗೆ ಸ್ಪಂದಿಸಿರುವ ರಾಜ್ಯ ಸರ್ಕಾರ, ಪೊಲೀಸ್ ಪೇದೆಗಳ ನೇಮಕಾತಿಯಲ್ಲಿ ಎರಡು ವರ್ಷ ವಯೋಮಿತಿ ಸಡಿಲಿಸಿ ಆದೇಶ ಹೊರಡಿಸಿದೆ.

ಮುಂಚೆ ಎಸ್ಸಿ, ಎಸ್ಟಿ 27 ವರ್ಷ ವಯೋಮಿತಿ ಇತ್ತು. ಇವಾಗ 29 ವರ್ಷಕ್ಕೆ ಏರಿಕೆ ಮಾಡಲಾಗಿದೆ. ಸಾಮಾನ್ಯ ವರ್ಗದವರಿಗೆ ವಯೋಮಿತಿಯನ್ನು 25 ರಿಂದ 27 ವರ್ಷಕ್ಕೆ ಹೆಚ್ಚಿಸಲಾಗಿದೆ. ಬುಡಕಟ್ಟು ಜನಾಂಗದವರ ವಯೋಮಿತಿಯನ್ನು 32 ವರ್ಷಕ್ಕೆ ಹೆಚ್ಚಿಸಲಾಗಿದೆ.

ಅರ್ಜಿ ಸಲ್ಲಿಸಲು ಕೊನೆಯ ದಿನವನ್ನು ನವೆಂಬರ್ 30ರವರೆಗೆ ಸರ್ಕಾರ ವಿಸ್ತರಿಸಿದೆ. ಈ ವರ್ಷ ರಾಜ್ಯ ಸರ್ಕಾರ, 5 ಸಾವಿರ ಪೋಲಿಸ್ ಕಾನ್ಸ್ಟೇಬಲ್ ನೇಮಕಾತಿಗೆ ಮುಂದಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ