ಬಂಗಾರ ಪ್ರಿಯರಿಗೊಂದು ಗುಡ್ ನ್ಯೂಸ್!

ಸೋಮವಾರ, 24 ಜನವರಿ 2022 (07:32 IST)
ನವದೆಹಲಿ : ದೇಶದಲ್ಲಿ ಸದ್ಯ ಎಲ್ಲೆಲ್ಲೂ ಕೊರೋನಾದ್ದೇ ಸುದ್ದಿ. ಹೀಗಿರುವಾಗ ಚಿನ್ನದ ದರ ಹೇಗಿದೆ ಎಂಬ ಕುತೂಹಲ ಹಲವರಲ್ಲಿ ಮನೆ ಮಾಡಿದೆ.
 
ಚಿನ್ನದ ದರ ಇಳಿಕೆಯಾಗಿದೆಯಾ? ಏರಿಕೆಯಾಗಿದೆಯಾ? ಎಂಬ ಪ್ರಶ್ನೆ ಹಲವರಿಗಿದೆ. ಹೀಗಿರುವಾಗ ಚಿನ್ನ ಕೊಳ್ಳಲು ಸಿದ್ಧರಾದವರಿಗೆ ಗುಡ್ ನ್ಯೂಸ್ ಸಿಕ್ಕಿದೆ. ಹೌದು ಚಿನ್ನದ ದರ ಇಳಿಕೆಯಾಗಿದ್ದು, ಗ್ರಾಹಕರಿಗೆ ಸಿಹಿ ಸಿಕ್ಕಿದೆ.

ಬೆಂಗಳೂರಿನಲ್ಲಿ ಹೊಸ ವರ್ಷಾಚರಣೆ ಸಂದರ್ಭದಲ್ಲಿ ಚಿನ್ನದ ದರ ಇಳಿಕೆಯಾಗಿದೆ. 22 ಕ್ಯಾರಟ್ 10 ಗ್ರಾಂ ಚಿನ್ನದ ಬೆಲೆ 45,500 ರೂಪಾಯಿ ಆದರೆ, 24 ಕ್ಯಾರಟ್ 10 ಗ್ರಾಂ ಚಿನ್ನದ ದರ 49,640ರೂ.ಇದೆ. ಇನ್ನು ಅತ್ತ ಒಂದು ಕೆ. ಜಿ ಬೆಳ್ಳಿ ದರ 69,000 ರೂಪಾಯಿ ಆಗಿದೆ.

ಒಂದು ದಿನ ಕುಸಿಯುವ ಚಿನ್ನದ ದರ ಮರುದಿನವೇ ಏರಿಕೆಯ ಹಾದಿ ಹಿಡಿರುವುದು ಗ್ರಾಹಕರನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಹೀಗಿರುವಾಗ ಚಿನ್ನ ಖರೀದಿಸಲು ಇದು ಉತ್ತಮ ಸಮಯವಾ? ಅಥವಾ ಇನ್ನೂ ಕೊಂಚ ಕಾಯುವುದು ಸರಿನಾ? ಎಂಬ ಪ್ರಶ್ನೆಯೂ ಈ ಗೊಂದಲಕ್ಕೆ ಕಾರಣವಾಗಿದೆ.

ಹೀಗಿದ್ದರೂ ಇಂದು ಚಿನ್ನ, ಬೆಳ್ಳಿ ದರದಲ್ಲಿ ಏರಿಕೆಯಾಗದಿರುವುದು ಗ್ರಾಹಕರಿಗೆ ಕೊಂಚ ಸಮಾಧಾನ ಕೊಟ್ಟಿದೆ. ಹೌದು ಇಂದು ಮುಂಬೈ ಹೊರತುಪಡಿಸಿ ಉಳಿದೆಡೆ ಚಿನ್ನದ ಬೆಲೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಹೀಗಿದ್ದರೂ ಒಮಿಕ್ರಾನ್ ಆತಂಕದ ಮಧ್ಯೆ ಚಿನ್ನದ ದರ ಕುಸಿಯಲಿದೆ ಎಂಬ ಮಾತುಗಳು ಆರ್ಥಿಕ ತಜ್ಞರದ್ದಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ