ಎರಡು ಡೋಸ್ ಲಸಿಕೆ ಪಡೆದವರಿಗೆ ಗುಡ್ ನ್ಯೂಸ್

ಸೋಮವಾರ, 6 ಡಿಸೆಂಬರ್ 2021 (12:10 IST)
ಬೆಂಗಳೂರು : ಮೊದಲ ಡೋಸ್ ಶೇ.93, ಎರಡನೇ ಡೋಸ್ ಶೇ.64 ಜನರು ಕೊರೊನಾ ಲಸಿಕೆಯನ್ನು ತೆಗೆದುಕೊಂಡಿದ್ದಾರೆ.
ಎರಡು ಡೋಸ್ ಲಸಿಕೆ ಪಡೆದವರಿಗೆ ಓಮಿಕ್ರಾನ್ ತೀವ್ರತೆ ಇರಲ್ಲ ಎಂದು ಸಚಿವ ಕೆ.ಸುಧಾಕರ್ ತಿಳಿಸಿದರು.
ಹೆಚ್ಚುತ್ತಿರುವ ಸೋಂಕಿನ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, 5 ಜನರ ರಿಪೋರ್ಟ್ ಇನ್ನೂ ಬಂದಿಲ್ಲ. ರಿಪೋರ್ಟ್ ಬಂದ ಕೂಡಲೇ ಮಾಹಿತಿ ಕೊಡ್ತೀವಿ. ನಮ್ಮ ರಾಜ್ಯದಲ್ಲಿ ಓಮಿಕ್ರಾನ್ ಬಂದ ಸಂಪರ್ಕದಲ್ಲಿ ಯಾವುದೇ ಸಮಸ್ಯೆ ಇಲ್ಲ. ಸಂಪರ್ಕಿತರು ಎರಡು ಡೋಸ್ ತೆಗೆದುಕೊಂಡಿದ್ದಾರೆ ಎಂದು ಮಾಹಿತಿ ನೀಡಿದರು. 
ಎರಡು ಡೋಸ್ ಪಡೆದವರಿಗೆ ತೀವ್ರತೆ ಇರೋದಿಲ್ಲ. ಸಂಪೂರ್ಣ ರೋಗ ನಿರೋಧಕ ಬರಬೇಕಾದ್ರೆ ಎರಡು ಡೋಸ್ ಪಡೆಯಬೇಕು. ಕೇಂದ್ರದಿಂದ ಯಾವುದೇ ಮಾರ್ಗಸೂಚಿ ಬಂದಿಲ್ಲ. ಡೆಲ್ಟಾವನ್ನು ನಾವು ಎದುರಿಸಿದ್ದೇವೆ. ಓಮಿಕ್ರಾನ್ ಹರಡುವಿಕೆ ಇದೆ. ಆದ್ರೆ ತೀವ್ರತೆ ಇಲ್ಲ. ಆತಂಕ ಪಡೋ ಅಗತ್ಯ ಇಲ್ಲ. ಮುಂಜಾಗ್ರತೆ ತೆಗೆದುಕೊಳ್ಳಿ ಎಂದು ಜನರಲ್ಲಿ ಮನವಿಯನ್ನು ಮಾಡಿಕೊಂಡರು.
ನಮ್ಮಲ್ಲಿ 70 ಲಕ್ಷ ಲಸಿಕೆ ದಾಸ್ತಾನು ಇದೆ. ಆದಷ್ಟು ಬೇಗ ಜನರು ಲಸಿಕೆ ಪಡೆಯಬೇಕು ಎಂದು ತಿಳಿಸಿದ ಅವರು ಅಂತರಾಷ್ಟ್ರೀಯ ವಿಮಾನ ಸ್ಥಗಿತ ವಿಚಾರವಾಗಿ ಮಾತನಾಡಿದ್ದು, ಈ ಕುರಿತು ಕೇಂದ್ರ ಸರ್ಕಾರ ನಿರ್ಧಾರ ಮಾಡುತ್ತೆ. ಕೇಂದ್ರ ಈ ಬಗ್ಗೆ ಅಧ್ಯಯನ ಮಾಡ್ತಿದೆ. ಸಮಗ್ರ ವರದಿ ಬಂದ ಮೇಲೆ ಕೇಂದ್ರ ಕ್ರಮ ತೆಗೆದುಕೊಳ್ಳುತ್ತೆ ಎಂದು ತಿಳಿಸಿದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ