ಚಿನ್ನ ಪ್ರಿಯರಿಗೆ ಗುಡ್‌ನ್ಯೂಸ್‌!

ಶನಿವಾರ, 7 ಮೇ 2022 (14:09 IST)
ಬೆಂಗಳೂರು : ಕೊರೋನಾ ಬಳಿಕ ಏರಿಕೆ ಹಾದಿ ಹಿಡಿದು, ದಾಖಲೆ ಸೃಷ್ಟಿಸಿದ್ದ ಚಿನ್ನದ ದರ ಪ್ರಕರಣಳು ಕುಸಿತಗೊಂಡಾಗ ಕೊಂಚ ಇಳಿಕೆ ಕಂಡಿತ್ತು.

ಆದರೆ ರಷ್ಯಾ ಉಕ್ರೇನ್ ಯುದ್ಧದ ಸಂದರ್ಭದಲ್ಲಿ ಮತ್ತೆ ಏರಿಕೆ ಕಂಡಿತ್ತು. ಇದು ಚಿನ್ನ ಕೊಳ್ಳಲು ತಯಾರಾದವರಿಗೆ ಶಾಕ್ ಕೊಟ್ಟಿತ್ತು. ಇದಾದ ಬಳಿಕ ಏರಿಕೆಗೆ ಕೊಂಚ ಬ್ರೇಕ್ ಬಿದ್ದಿದೆಯಾದರೂ ಚಿನ್ನ, ಬೆಳ್ಳಿ ದರ ಮಾತ್ರ ಇಳಿಕೆಯಾಗಿಲ್ಲ. ಇನ್ನು ಬೆಂಗಳೂರಿನಲ್ಲಿ ಇಂದು ಚಿನ್ನ ದರ ಎಷ್ಟಿದೆ? ದೇಶದ ಪ್ರಮುಖ ನಗರಗಳಲ್ಲಿ ದರ ಹೇಗಿದೆ? 

ಒಂದು ಗ್ರಾಂ
22 ಕ್ಯಾರೆಟ್ ಆಭರಣ ಚಿನ್ನದ ಬೆಲೆ - ರೂ.  4,710
24 ಕ್ಯಾರೆಟ್ ಬಂಗಾರದ ಬೆಲೆ (ಅಪರಂಜಿ) - ರೂ.  5,138

ಇತರೆಡೆ ಇಂದಿನ ಗೋಲ್ಡ್ ರೇಟ್

ರಾಜಧಾನಿ ನಗರ ಬೆಂಗಳೂರಿನಲ್ಲಿ ಇಂದು 22 ಕ್ಯಾರಟ್ ಬಂಗಾರದ ಬೆಲೆ (ಹತ್ತು ಗ್ರಾಂ) ರೂ. 47,100 ಆಗಿದ್ದರೆ ಚೆನ್ನೈ, ಮುಂಬೈ ಹಾಗೂ ಕೋಲ್ಕತ್ತಾ ನಗರಗಳಲ್ಲಿ ಕ್ರಮವಾಗಿ ಇದರ ಬೆಲೆ ರೂ. 48,647, ರೂ. 47,100, ರೂ. 47,100 ಆಗಿದೆ. ದೇಶದ ರಾಜಧಾನಿ ದೆಹಲಿಯಲ್ಲಿ ಇಂದು ಚಿನ್ನದ ಬೆಲೆ 47,100 ರೂ. ಆಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ