ಶಾಲಾ ಕಾಲೇಜಿನಲ್ಲಿ ಹಿಬಾಜ್ ಬ್ಯಾನ್!

ಶುಕ್ರವಾರ, 11 ಫೆಬ್ರವರಿ 2022 (12:42 IST)
ಕೇರಳ :  ಹಿಜಾಬ್ ವಿವಾದ ಇಡೀ ದೇಶವನ್ನೇ ಆವರಿಸಿಕೊಂಡಿದೆ.
 
ಮುಸ್ಲಿಮರ ಮೂಲಭೂತ ಹಕ್ಕನ್ನು ದಮನಿಸಲಾಗುತ್ತಿದೆ ಅನ್ನೋ ವಾದ ಒಂದಡೆಯಾದರೆ, ಸಮವಸ್ತ್ರ ಹೊರತು ಇನ್ಯಾವ ಧರ್ಮದ ವಸ್ತ್ರಗಳಿಗೆ ಅವಕಾಶವಿಲ್ಲ ಅನ್ನೋ ವಾದ ಮತ್ತೊಂದೆಡೆ.

ಇದರ ನಡುವೆ ಅತೀ ಮುಖ್ಯವಾಗಿ ಕೇರಳದ ಮುಸ್ಲಿಂ ಶಿಕ್ಷಣ ಸಂಸ್ಥೆ ನೀಡಿದ ಸುತ್ತೋಲೆ ಎಲ್ಲರೂ ಗಮನಿಸಲೇಬೇಕು. ಮುಸ್ಲಿಂ ಶಿಕ್ಷಣ ಸಂಸ್ಥೆ ಕೇರಳದ 150 ಶಾಲಾ ಕಾಲೇಜಿನಲ್ಲಿ ಹಿಜಾಬ್, ಬುರ್ಖಾ ಬ್ಯಾನ್ ಮಾಡಿದೆ.

ಮುಸ್ಲಿಂ ಎಜುಕೇಶನಲ್ ಸೊಸೈಟಿ ಈ ಸುತ್ತೋಲೆ ಹೊರಡಿಸಿರುವುದು 2019ರಲ್ಲಿ. MES ಕೇರಳದಲ್ಲಿ 150 ಶಾಲಾ ಕಾಲೇಜುಗಳನ್ನು ನಡೆಸುತ್ತಿದೆ. ಒಟ್ಟು 85,000 ವಿದ್ಯಾರ್ಥಿಗಳು ಹಾಗೂ 15,000 ಶಿಕ್ಷಕರು, ಸಹಾಯಕ ಸಿಬ್ಬಂದಿ ಸೇರಿದಂತೆ ವೃತ್ತಿಪರರು ಈ ಸಂಸ್ಥೆಗಳಲ್ಲಿ ಕೆಲಸ ಮಾಡುತ್ತಿದ್ದಾರೆ.

MES ನಡೆಸಲ್ಪಡುವ ಎಲ್ಲಾ ಮುಸ್ಲಿಂ ಶಾಲಾ ಕಾಲೇಜುಗಳಲ್ಲಿ ಹಿಜಾಬ್ ಬ್ಯಾನ್ ಮಾಡಿದೆ. MES ನಿಂದ 10 ವೃತ್ತಿಪರ ಸಂಸ್ಥೆಗಳು, 18 ಕಲೆ ಮತ್ತು ವಿಜ್ಞಾನ ಕಾಲೇಜುಗಳು, 36 CBSE ಶಾಲೆಗಳು ಹಾಗೂ ಇತರ ಶಿಕ್ಷಣ ಸಂಸ್ಥೆಗಳು ನಡೆಸುತ್ತಿದೆ.

ಕೆಲ ಸಾಂಪ್ರದಾಯ ವಾದಿಗಳು ಮುಸ್ಲಿಂ ಹೆಣ್ಣುಮಕ್ಕಳಿಗೆ ಡ್ರೆಸ್ ಕೋಡ್ ಹೇರುತ್ತಿದ್ದಾರೆ. ಹೆಣ್ಣನ್ನು ಡ್ರೆಸ್‌ನೊಳಗಡೆ ಬಂಧಿಯಾಗಿಡಲು ಮೂಲಭೂತ ಸಂಪ್ರದಾಯವಾದಿಗಳು ಬಯಸುತ್ತಿದ್ದಾರೆ.

ಮುಸ್ಲಿಂ ಶಿಕ್ಷಣ ಸಂಸ್ಥೆಯ ಎಲ್ಲಾ ವಿದ್ಯಾಸಂಸ್ಥೆಗಳಲ್ಲಿ ಹಿಜಾಬ್ ಬ್ಯಾನ್ ಮಾಡಲಾಗಿದೆ. ಹೀಗಾಗಿ ಶಾಲೆಯ ಸಮವಸ್ತ್ರಕ್ಕೆ ಎಲ್ಲರೂ ಬದ್ಧರಾಗಿರಬೇಕು ಎಂದು 2019ರಲ್ಲಿ ಸುತ್ತೊಲೆಯಲ್ಲಿ ಹೇಳಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ