3 ಕೃಷಿ ಕಾಯ್ದೆಯನ್ನ ಅಧಿಕೃತವಾಗಿ ಹಿಂಪಡೆಯೋದ್ರಾ ಜೊತೆಗೆ ಬೆಂಬಲ ಬೆಲೆ ಖಾತ್ರಿಪಡಿಸುವಂತೆ ಆಗ್ರಹಿಸಿ ರೈತರು ನಾಳೆ ಹೆದ್ದಾರಿಯನ್ನ ಬಂದ್ ಮಾಡಿ ಪ್ರತಿಭಟನೆಯನ್ನ ನಡೆಸಲಿದ್ದಾರೆ.
ದೆಹಲಿಯಲ್ಲಿ ರೈತರು ಪ್ರತಿಭಟನೆಯನ್ನ ನಡೆಸಲಿದ್ದು, ಬೇಡಿಕೆ ಬೆಂಬಲಿಸಿ ರೈತರು ಹೆದ್ದಾರಿಗಳನ್ನ ಬಂದ್ ಮಾಡಲಿದ್ದಾರೆ. ರಾಜ್ಯ ರೈತ ಸಂಘಟನೆಗಳ ಒಕ್ಕೂಟದಿಂದ ಹೆದ್ದಾರಿ ಬಂದ್ ಗೆ ತೀರ್ಮಾನ ಮಾಡಲಾಗಿದ್ದು, ರೈತ ಮುಖಂಡರಾದ ಕೋಡಿಹಳ್ಳಿ ಚಂದ್ರಶೇಖರ್, ಬಡಗಲಪುರ ನಾಗೇಂದ್ರ ನೇತೃತ್ವದಲ್ಲಿ ಹೆದ್ದಾರಿಗಳ ಬಂದ್ ನಡೆಯಲಿದೆ. ಇನ್ನು ಪ್ರತಿಭಟನೆ ವೇಳೆ ರೈತರ ಮೇಲೆ ದಾಖಲಾಗಿರುವ ಕೇಸ್ ಗಳನ್ನೂ ಸರ್ಕಾರ ಹಿಂಪಡೆಯಬೇಕು. ಹುತಾತ್ಮ ರೈತರಿಗೆ ಮೋದಿ ಸರ್ಕಾರ ತಲಾ 1 ಕೋಟಿ ರೂಪಾಯಿ ಪರಿಹಾರ ನೀಡಬೇಕು ಹಾಗೆ ಬೊಮ್ಮಾಯಿ ಸರ್ಕಾರ ಕೂಡ 10 ಲಕ್ಷ ಪರಿಹಾರ ನೀಡಬೇಕೆಂದು ಒತ್ತಾಯಿಸಿ ರೈತರು ಹೆದ್ದಾರಿ ಬಂದ್ಗೆ ಮುಂದಾಗಿದ್ದಾರೆ.