ಗಡಿಯ ಎಷ್ಟು ಗ್ರಾಮಗಳು ಕರ್ನಾಟಕಕ್ಕೆ ಸೇರುತ್ತವೆ?

ಮಂಗಳವಾರ, 21 ಡಿಸೆಂಬರ್ 2021 (06:50 IST)
ಬೆಂಗಳೂರು : ಕರ್ನಾಟಕದಲ್ಲೇ ನೆಲೆಸಿ, ಇಲ್ಲಿನ ನೆಲ, ಜಲ, ಸಕಲ ಸೌಕರ್ಯ ಅನುಭವಿಸುತ್ತ. ಕನ್ನಡಿಗರ ಅಸ್ಮಿತೆ ಕೆಣಕಿ, ಶಾಂತಿ ಕದಡುತ್ತಿರುವ ನಾಡದ್ರೋಹಿಗಳ ವಿರುದ್ಧ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ದಿಟ್ಟ ಕ್ರಮ ತೆಗೆದುಕೊಂಡಿದ್ದಾರೆ.
 
ಕನ್ನಡಿಗರು ಎಷ್ಟು ಶಾಂತಿಪ್ರಿಯರೋ ಕೆಣಕಿದರೆ ಅಷ್ಟೇ ಕೆಚ್ಚೆದೆವುಳ್ಳವರು ಅಂತ ಪುಂಡರ ವಿರುದ್ಧ ಕಾನೂನಾತ್ಮಕ ಭಾಷೆಯಲ್ಲೇ ಉತ್ತರ ಕೊಟ್ಟಿದ್ದಾರೆ. ಎಂಇಎಸ್ ಗೂಂಡಾಗಿರಿಯಿಂದ 4 ದಿನಗಳಿಂದ ರಾಜ್ಯದಲ್ಲಿ ಮನೆ ಮಾಡಿರುವ ಕಾರ್ಮೋಡವನ್ನು ತಿಳಿಗೊಳಿಸಿದ ಸಿಎಂ, ಕೆಚ್ಚೆದೆಯ ನಿರ್ಣಯಗಳನ್ನು ತೆಗೆದುಕೊಂಡಿದ್ದಾರೆ. 

ತಂಟೆಕೋರರ ವಿರುದ್ಧ ಬೆಳಗಾವಿ ಕನ್ನಡಸೌಧದಲ್ಲಿ ಖಂಡನಾ ನಿರ್ಣಯ ಕೈಗೊಂಡು ಗಡಿ, ಕನ್ನಡ ಭಾಷೆ, ಕನ್ನಡಿಗರ ರಕ್ಷಣೆಯ ಸಂಕಲ್ಪ ತೊಟ್ಟಿದ್ದಾರೆ.

ಮಹಾರಾಷ್ಟ್ರದ ಗಡಿಯ 40 ಗ್ರಾಮಗಳು ಕರ್ನಾಟಕ ಸೇರಲು ಮಹಾರಾಷ್ಟ್ರ ಸರ್ಕಾರಕ್ಕೆ ಅರ್ಜಿ ಸಲ್ಲಿಸಲಾಗಿದೆ. ಅವರು ರಾಜ್ಯಕ್ಕೆ ಬರುವಂತಿದ್ದರೆ ಬರಲಿ ಇದು ವಿವಾದ ಆಗುತ್ತದೆ ಎಂದು ಗೊತ್ತಿದೆ ಆದರೂ ಆಗಲಿ ರಾಜ್ಯಕ್ಕೆ ಬನ್ನಿ ಅಂತ ಆಹ್ವಾನ ನೀಡಿದ್ದಾರೆ.

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ