ಬೆಂಗಳೂರು : ಈ ಹಿಂದೆ ಆಟೋದಲ್ಲಿ ಮಿನಿಮಮ್ ಚಾರ್ಚ್ 25 ರೂಪಾಯಿ ಇತ್ತು.
ಸದ್ಯ ಈ ದರಕ್ಕೆ ಈಗ ಹೆಚ್ಚುವರಿಯಾಗಿ 5 ರೂಪಾಯಿ ಸೇರ್ಪಡೆಯಾಗಿದ್ದು, ಇಂದಿನಿಂದ ಮಿನಿಮಮ್ ಚಾರ್ಜ್ 30ಕ್ಕೆ ಏರಿಕೆಯಾಗಿದೆ. ಜೊತೆಗೆ ಪ್ರತಿ ಕಿಲೋ ಮೀಟರ್ಗೆ ಈ ಹಿಂದೆ 13 ರೂಪಾಯಿ ದರ ಇತ್ತು, ಈಗ ಅದನ್ನು 15 ರೂಪಾಯಿಗೆ ಏರಿಕೆ ಮಾಡಲಾಗಿದೆ.
ಅದೇ ರೀತಿ ಮೊದಲು ಐದು ನಿಮಿಷ ಕಾಯುವಿಕೆ ಫ್ರೀ ಇದ್ದು, ಐದು ನಿಮಿಷದ ಬಳಿಕ ಪ್ರತಿ ನಿಮಿಷಕ್ಕೆ 5 ರೂಪಾಯಿ ಚಾರ್ಜ್ ಮಾಡಲು ಅವಕಾಶ ಕೊಡಲಾಗಿದೆ. ಅಲ್ದೆ, ಉಚಿತವಾಗಿ 20 ಕೆಜಿ ವರೆಗೆ ಲಗೇಜ್ ಸಾಗಣೆ ಮಾಡಬಹುದು. ಆದ್ರೆ, 21ರಿಂದ 50ಕೆಜಿ ತೂಕದ ಲಗೇಜ್ ಇದ್ರೆ 5 ರೂಪಾಯಿ ಕೊಡಬೇಕಾಗಿದೆ. ಹಾಗೆ ರಾತ್ರಿ ಈ ಹಿಂದಿನಂತೆ ಮೀಟರ್ ಮೇಲೆ ಅರ್ಧದಷ್ಟು ಹೆಚ್ಚುವರಿ ದರ ಪಡೆದುಕೊಳ್ಳಲು ಅವಕಾಶ ಕಲ್ಪಿಸಲಾಗಿದೆ.
8 ವರ್ಷಗಳ ಬಳಿಕ ಆಟೋ ಪ್ರಯಾಣ ದರ ಏರಿಕೆ
2013 ರಲ್ಲಿ ಈ ಹಿಂದೆ ಆಟೋ ದರ ಏರಿಕೆ ಮಾಡಲಾಗಿತ್ತು. ಆದಾದ ಬಳಿಕ ಸಾಕಷ್ಟು ಬಾರಿ ಜಿಲ್ಲಾಡಳಿತಕ್ಕೆ ಈ ಬಗ್ಗೆ ಮನವಿ ಮಾಡಿದ್ರು ಆಟೋದರ ಏರಿಕೆಗೆ ಮನಸ್ಸು ಮಾಡಿರಲಿಲ್ಲ. ಆದ್ರೀಗ, 8 ವರ್ಷಗಳ ಬಳಿಕ ಆಟೋ ಚಾಲಕರು ಮತ್ತು ಮಾಲೀಕರ ಮನವಿಗೆ ಜಿಲ್ಲಾಡಳಿತ ಸ್ಪಂದಿಸಿ, ಆಟೋ ಪ್ರಯಾಣ ದರ ಏರಿಕೆಗೆ ಅಸ್ತು ಎಂದಿದೆ. ಇದ್ರಿಂದ ಆಟೋ ಚಾಲಕರು ಖುಷಿಯಾಗಿದ್ದು, ಇವತ್ತಿನಿಂದ ಫುಲ್ ಜೋಷ್ನಲ್ಲಿ ರೋಡಿಗಿಳೀತಿದ್ದಾರೆ.