ತಿರುಪತಿ ದೇವಸ್ಥಾನದ ಆದಾಯ ಎಷ್ಟು ಗೊತ್ತ?

ಶುಕ್ರವಾರ, 18 ಫೆಬ್ರವರಿ 2022 (11:41 IST)
ಅಮರಾವತಿ : ದೇಶದ ಶ್ರೀಮಂತ ದೇವಾಲಯಗಳಲ್ಲಿ ಒಂದಾಗಿರುವ ಆಂಧ್ರಪ್ರದೇಶದ ತಿರುಪತಿಯಲ್ಲಿರುವ ತಿರುಮಲ ತಿರುಪತಿ ದೇವಸ್ಥಾನ(ಟಿಟಿಡಿ) ಗುರುವಾರ ತನ್ನ 2022-23ನೇ ಸಾಲಿನ ಬಜೆಟ್ ಮಂಡಿಸಿದೆ.
 
ತಿರುಮಲದ ಪುರಾತನ ವೆಂಕಟೇಶ್ವರ ದೇವಾಲಯದ ಆಡಳಿತ ಮಂಡಳಿ 2022-23ರ ವಾರ್ಷಿಕ ಬಜೆಟ್ನಲ್ಲಿ 3,096.40 ಕೋಟಿ ರೂ. ಆದಾಯವನ್ನು ಅಂದಾಜಿಸಿದೆ.

ಮುಂದಿನ 12 ತಿಂಗಳ ಹಣಕಾಸು ಯೋಜನೆಯನ್ನು ಬಜೆಟ್ ಸಭೆಯಲ್ಲಿ ಪರಿಶೀಲಿಸಿದ ಬಳಿಕ ಟಿಟಿಡಿ ಮಂಡಳಿಯ ಅಧ್ಯಕ್ಷ ವೈ.ವಿ. ಸುಬ್ಬಾ ರೆಡ್ಡಿ ಹಾಗೂ ಕಾರ್ಯನಿರ್ವಾಹಕ ಅಧಿಕಾರಿ ಕೆ.ಎಸ್. ಜವಾಹರ ರೆಡ್ಡಿ ವಾರ್ಷಿಕ ಬಜೆಟ್ ಬಗ್ಗೆ ಮಾಧ್ಯಮಕ್ಕೆ ತಿಳಿಸಿದ್ದಾರೆ.

ದೇವಾಲಯದ ವಾರ್ಷಿಕ ಆದಾಯದಲ್ಲಿ ಸುಮಾರು 1,000 ಕೋಟಿ ರೂ. ಹುಂಡಿಯಲ್ಲಿ (ದಾನ-ಪಾತ್ರೆ) ಭಕ್ತರಿಂದ ಬರುತ್ತದೆ ಎಂದು ಅಂದಾಜಿಸಲಾಗಿದೆ. ರಾಷ್ಟ್ರೀಕೃತ ಹಾಗೂ ಖಾಸಗಿ ಬ್ಯಾಂಕ್ಗಳಲ್ಲಿನ ಠೇವಣಿ ಮೇಲಿನ ಬಡ್ಡಿ ಸುಮಾರು 668.5 ಕೋಟಿ ರೂ., ವಿವಿಧ ರೀತಿಯ ಟಿಕೆಟ್ಗಳ ಮಾರಾಟದಿಂದ 362 ಕೋಟಿ ರೂ. ಸಂಗ್ರಹವಾಗಬಹುದು ಎಂದು ಅಂದಾಜಿಸಲಾಗಿದೆ.

ಲಡ್ಡು ಪ್ರಸಾದ ಮಾರಾಟದಿಂದ 365 ಕೋಟಿ ರೂ., ವಸತಿ ಹಾಗೂ ಮದುವೆ ಮಂಟಪದ ಬಾಡಿಗೆಯಿಂದ 95 ಕೋಟಿ ರೂ., ಭಕ್ತರು ಅರ್ಪಿಸುವ ಕೂದಲು ಮಾರಾಟದಿಂದ 126 ಕೋಟಿ ರೂ. ಎಂದು ಅಂದಾಜಿಸಲಾಗಿದೆ. ಇದರೊಂದಿಗೆ ಮಂಡಳಿಯ ವಿವಿಧ ಸೇವೆಗಳ ವೆಚ್ಚವನ್ನು 1,360 ಕೋಟಿ ರೂ. ಎಂದು ಅಂದಾಜಿಸಲಾಗಿದೆ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ