ಏರ್‌ಟೆಲ್‌ ಗೆ ಎಷ್ಟು ಕೋಟಿ ಹೂಡಿಕೆ ಮಾಡಿದೆ ಗೂಗಲ್?

ಶನಿವಾರ, 29 ಜನವರಿ 2022 (08:53 IST)
ನವದೆಹಲಿ : ಅಮೆರಿಕಾ ತಂತ್ರಜ್ಞಾನ ದೈತ್ಯ ಗೂಗಲ್ ಟೆಲಿಕಾಂ ಕಂಪನಿ ಏರ್ಟೆಲ್ನೊಂದಿಗೆ ಒಂದು ಮಹತ್ತರ ಒಪ್ಪಂದ ನಡೆಸಿದೆ.

ಈ ಮೂಲಕ ಗೂಗಲ್ ಏರ್ಟೆಲ್ನಲ್ಲಿ 7 ಸಾವಿರ ಕೋಟಿ ರೂ. ಹೂಡಿಕೆ ಮಾಡುವುದಾಗಿ ಘೋಷಿಸಿದೆ. ಗೂಗಲ್ ಭಾರತದ ಪ್ರಮುಖ ಟೆಲಿಕಾಂ ಸಂಸ್ಥೆ ಭಾರತಿ ಏರ್ಟೆಲ್ನಲ್ಲಿ ಮುಂದಿನ 5 ವರ್ಷಗಳ ಅವಧಿಯಲ್ಲಿ 1 ಬಿಲಿಯನ್ ಡಾಲರ್(7,400 ಕೋಟಿ ರೂ.) ಹೂಡಿಕೆ ಮಾಡಲಿದೆ ಎಂದು ವರದಿಯಾಗಿದೆ.

ಈ ಒಪ್ಪಂದದ ಪ್ರಕಾರ ಗೂಗಲ್ ಸಂಸ್ಥೆ ಏರ್ಟೆಲ್ ಕಂಪನಿಯ ಶೇ. 1.28ರಷ್ಟು ಪಾಲುದಾರಿಕೆಯನ್ನು ತಲಾ ಷೇರಿಗೆ 734 ರೂ.ಯಂತೆ ಪಡೆದುಕೊಳ್ಳಲಿದೆ ಹಾಗೂ 300 ಮಿಲಿಯನ್ ಡಾಲರ್ ವಾಣಿಜ್ಯ ಒಪ್ಪಂದಗಳಿಗೆ ಹೂಡಿಕೆ ಮಾಡಲಿದೆ ಎಂದು ತಿಳಿಸಿದೆ.

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ