ರಾಘವೇಂದ್ರ ಸ್ವಾಮಿ ಮಠದಲ್ಲಿ ಭಾರೀ ಪ್ರಮಾಣದ ಕಾಣಿಕೆ ಸಂಗ್ರಹ

ಮಂಗಳವಾರ, 30 ಆಗಸ್ಟ್ 2022 (09:35 IST)
ರಾಯಚೂರು : ಗುರುರಾಯರ ಸನ್ನಿಧಿ ಮಂತ್ರಾಲಯ ಶ್ರೀರಾಘವೇಂದ್ರ ಸ್ವಾಮಿ ಮಠದಲ್ಲಿ ಕಳೆದ ಒಂದು ತಿಂಗಳಿಂದ ಭಕ್ತರಿಂದ ಭಾರೀ ಪ್ರಮಾಣದ ಕಾಣಿಕೆ ಹರಿದುಬಂದಿದೆ.

ಆಗಸ್ಟ್ ತಿಂಗಳ ಕಾಣಿಕೆ ಹುಂಡಿ ಎಣಿಕೆ ಕಾರ್ಯ ಪೂರ್ಣಗೊಂಡಿದ್ದು ಒಟ್ಟು 2,78,80,586 ರೂಪಾಯಿ ಸಂಗ್ರಹವಾಗಿದೆ.

ಸಂಗ್ರಹವಾದ ಕಾಣಿಕೆಯಲ್ಲಿ 5,89,300 ರೂ.ಗಳಷ್ಟು ನಾಣ್ಯಗಳು ಹಾಗೂ 2,72,91,286 ರೂ.ನಷ್ಟು ನೋಟುಗಳಿವೆ. 65 ಗ್ರಾಂ. ಬಂಗಾರ, 1.15 ಕೆ.ಜಿ ಬೆಳ್ಳಿಯಿದೆ. ಜುಲೈ ತಿಂಗಳಲ್ಲಿ ಒಟ್ಟು 1,97,21,825 ರೂ. ಸಂಗ್ರಹವಾಗಿತ್ತು, ಜೂನ್ನಲ್ಲಿ 2,52,33,205 ರೂಪಾಯಿ ಹಾಗೂ ಮೇ ತಿಂಗಳಲ್ಲಿ 2,27,42,499 ರೂಪಾಯಿ ಸಂಗ್ರಹವಾಗಿತ್ತು. 

ಈ ಬಾರಿ ಭಕ್ತರೊಬ್ಬರು 10 ರೂ. ನೋಟುಗಳಿಂದ ಮಾಡಿದ ಮಾಲೆಯನ್ನು ಕಾಣಿಕೆ ಹುಂಡಿಯಲ್ಲಿ ಹಾಕಿದ್ದು ವಿಶೇಷ ಕಾಣಿಕೆ ಎನಿಸಿದೆ ಎಂದು ಹುಂಡಿ ಎಣಿಕೆ ಕಾರ್ಯ ಮುಕ್ತಾಯದ ನಂತರ ಮಠದ ವ್ಯವಸ್ಥಾಪಕ ಶ್ರೀನಿವಾಸ ರಾವ್ ಮಾಹಿತಿ ನೀಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ