ಬಿಜೆಪಿ ಮುಖಂಡರಿಗೆ ಚಪ್ಪಲಿ ಎಸೆಯುವ ಬೆದರಿಕೆ ಹಾಕಿದ ಹುಲಕೋಟಿ ಗ್ರಾಮಸ್ಥರು

ಶನಿವಾರ, 31 ಮಾರ್ಚ್ 2018 (15:30 IST)
ಇಂದು ಹಾಲಿ ಶಾಸಕ ಸಚಿವ ಪ್ರಭಾವಿ ಮುಖಂಡರಾದ ಹುಲಕೋಟಿ ಹುಲಿ ಎಂದೇ ಖ್ಯಾತಿ ಪಡೆದ ಸಚಿವ ಎಚ್.ಕೆ. ಪಾಟೀಲ ತವರು ಗ್ರಾಮಕ್ಕೆ ಇಂದು ಬಿಜೆಪಿ ಪಕ್ಷದ ಟಿಕೆಟ್ ಆಕಾಂಕ್ಷಿಗಳಾದ ಅನಿಲ ಮೆಣಸಿನಕಾಯಿ  ಹಾಗೂ ಬಿಜೆಪಿ ಕಾರ್ಯಕರ್ತರು ಹುಲಕೋಟಿ ಗ್ರಾಮಕ್ಕೆ ಪ್ರಚಾರಾರ್ಥವಾಗಿ ಭೇಟಿ ನೀಡುವುದಕ್ಕೆ ತೆರಳುತ್ತಿದ್ದಂತೆ ಹುಲಕೋಟಿ ಗ್ರಾಮಸ್ಥರಿಂದ ಹುಲಕೋಟಿ ಗ್ರಾಮದಲ್ಲಿ ಪ್ರಚಾರ ನಡೆಸಬಾರದು. ಒಂದು ವೇಳೆ ಮುಂದಾದ್ರೇ ಚಪ್ಪಲಿ ಎಸೆತೇವೆ ಅಂತಾ ಕಾರ್ಯಕರ್ತರಿಗೆ ಧಮಕಿ ಹಾಕಿರುವ ಘಟನೆ ವರದಿಯಾಗಿದೆ. 
ಇದರಿಂದ ವಿಚಲಿತಗೊಂಡ ಕಾರ್ಯಕರ್ತರು ಹುಲಕೋಟಿ ಗ್ರಾಮದ ಹೊರವಲಯದಲ್ಲಿಯೇ ಕಾರುಗಳನ್ನು ನಿಲ್ಲಿಸಿ ಪಾದಯಾತ್ರೆ ಮೂಲಕ ಹುಲಕೋಟಿ ಗ್ರಾಮಕ್ಕೆ ಎಂಟ್ರಿ ಕೊಟ್ರು. ಭಯದ ವಾತಾವರಣದಲ್ಲಿಯೇ ಮತಯಾಚಿಸಿ ರಾಮಮಂದಿರ ಹಾಗೂ ಬೀರಲಿಂಗೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ್ರು. ನಂತರ ಅಲ್ಲಿಂದ ಹಿರೇಹಂದಿಗೋಳ ಗ್ರಾಮಕ್ಕೆ ತೆರಳಿ ಅಲ್ಲಿಯೂ ಪ್ರಚಾರ ನಡೆಸಲಾಯಿತು. 
 
 ವಿಶೇಷ ಅಂದ್ರೆ ಕಳೆದ ಹಲವಾರು ವರ್ಷಗಳಿಂದ ಹುಲಕೋಟಿ ಗ್ರಾಮಕ್ಕೆ ಕಾಂಗ್ರೆಸ್ ಹೊರತುಪಡಿಸಿ ಯಾವುದೇ ಪಕ್ಷದವರು ಇಲ್ಲಿ ಚುನಾವಣಾ ಪ್ರಚಾರ ನಡೆಸಿಲ್ಲ. ಹಿಂದೆ ಚುನಾವಣೆ ವೇಳೆ ಪ್ರಚಾರಕ್ಕೆ ಬಂದಾಗ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನವರಿಗೆ ಹುಲಕೋಟಿ ಗ್ರಾಮದಲ್ಲಿ ಹಲ್ಲೆ ನಡೆಸಲಾಗಿತ್ತು.
 
ಗದಗ ಕ್ಷೇತ್ರದ ಬಿಜೆಪಿ ಟಿಕೆಟ್ ಗಾಗಿ ನಾ ಮುಂದು ತಾ ಮುಂದು ಎನ್ನುವ ಟಿಕೆಟ್ ಆಕಾಂಕ್ಷಿಗಳು ಇಂದು ಅನಿಲ ಮೆಣಸಿನಕಾಯಿ ಅವರನ್ನು ಹೊರತುಪಡಿಸಿದ್ರೆ ಯಾರು ಇರಲಿಲ್ಲ ಎನ್ನಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ