ವಾಯುಭಾರ ಕುಸಿತದಿಂದ ಚಂಡಮಾರುತ!

ಶನಿವಾರ, 19 ಮಾರ್ಚ್ 2022 (12:53 IST)
ವಾಯುಭಾರ ಕುಸಿತದಿಂದ ಬಂಗಾಳಕೊಲ್ಲಿಯಲ್ಲಿ ಭಾನುವಾರ ‘ಅಸನಿ’ ಚಂಡಮಾರುತವಾಗಲಿದೆ ಎಂದು ತಜ್ಞರು ಸೂಚನೆ ಕೊಟ್ಟಿದ್ದಾರೆ.
 
ಮಾರ್ಚ್ 21ಕ್ಕೆ ಅಂಡಮಾನ್ ಮತ್ತು ನಿಕೋಬರ್ ದ್ವೀಪಕ್ಕೆ ‘ಅಸನಿ’ ಚಂಡಮಾರುತ ಅಪ್ಪಳಿಸುತ್ತೆ ಎಂದು ಭಾರತೀಯ ಹವಾಮಾನ ಇಲಾಖೆ(ಐಂಡಿ) ಮುನ್ಸೂಚನೆಯನ್ನು ಕೊಟ್ಟಿದೆ.

ʼಅಸನಿ’ ಚಂಡಮಾರುತ ಮೊದಲು ಅಂಡಮಾನ್ ಮತ್ತು ನಿಕೋಬರ್ ನಲ್ಲಿ ಪ್ರಾರಂಭವಾಗಿ ಉತ್ತರಾಭಿಮುಖವಾಗಿ ಸಾಗಲಿದ್ದು, ಬಾಂಗ್ಲಾದೇಶ ಮತ್ತು ಮ್ಯಾನ್ಮಾರ್ ಉತ್ತರ ಕರಾವಳಿಯತ್ತ ಬರುತ್ತೆ ಎಂದು ಸೂಚನೆ ಕೊಟ್ಟಿದೆ.

ಈ ಹಿನ್ನೆಲೆ ಬಂಗಾಳಕೊಲ್ಲಿ ಮತ್ತು ಅಂಡಮಾನ್ ಸಮುದ್ರದಲ್ಲಿ ಮೀನುಗಾರರು ಮಾರ್ಚ್ 20 ರಿಂದ ಮೂರು ದಿನಗಳ ಕಾಲ ಮೀನುಗಾರಿಕೆ ಮಾಡಬಾರದು ಎಂದು ಎಚ್ಚರಿಕೆ ಕೊಟ್ಟಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ