ರಾಜಧಾನಿ ಬೆಂಗಳೂರು ಮಳೆಯಿಂದ ಆಕ್ಷರ ಸಹ ತತ್ತರಿಸಿ ಹೋಗಿತ್ತು. ನಗರದಲ್ಲಿ ಬಾರಿ ಪ್ರಮಾಣದ ಆಪತ್ತು ಬಂದು ಒದಾಗಿತ್ತು. ಆದ್ರೆ ಈಗ ಮತ್ತೆ ಶನಿವಾರದಿಂದ ವರುಣರಾಯನ ಅಬ್ಬರ ಶುರುವಾಗಲಿದೆ. ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತ ಉಂಟಾಗುವ ಸಾಧ್ಯತೆ ಇದ್ದು, ಅದರ ಪರಿಣಾಮ ನಗರದ ಮೇಲೆ ಬೀರಲಿದೆ. ಹೀಗಾಗಿ ಬಳ್ಳಾರಿ, ಕೊಪ್ಪಳ, ತುಮಕೂರು , ಬೆಳಗಾವಿ, ಕಲಬುರಗಿ, ಕೋಲಾರ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಹೆಚ್ಚಿನ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಅಷ್ಟೇ ಅಲ್ಲದೆ ನಗರದಲ್ಲಿ ಇಂದು ಮತ್ತು ನಾಳೆ ಮೋಡಕಾವಿದ ವಾತವರಣ ಮುಂದುವರೆಯಲಿದ್ದು , ನಗರದ ವಿವಿಧೆಡೆ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆಯ ಸದಾನಂದ ಅಡಿಗ ಮಾಹಿತಿ ನೀಡಿದ್ದಾರೆ.