ಸೋಂಕಿತರ ಸಂಖ್ಯೆಯಲ್ಲಿ ಹೆಚ್ಚಳ! ರಾತ್ರಿ ಗುಂಪುಗೂಡುವುದು ನಿಷೇಧ

ಶನಿವಾರ, 25 ಡಿಸೆಂಬರ್ 2021 (12:19 IST)
ಮುಂಬೈ : ಮಹಾರಾಷ್ಟ್ರದಲ್ಲಿ ಒಮಿಕ್ರಾನ್ ಸೋಂಕಿತರ ಸಂಖ್ಯೆ ಏರುತ್ತಿದ್ದಂತೆ, ನಿಯಂತ್ರಣಕ್ಕಾಗಿ ಬಿಗಿ ಕ್ರಮಗಳನ್ನು ಕೈಗೊಳ್ಳಲಾಗಿದೆ.
 
ದೇಶದಲ್ಲಿ ನೋಡನೋಡುತ್ತಿದ್ದಂತೆ ಒಮಿಕ್ರಾನ್ ಸೋಂಕಿತರ ಸಂಖ್ಯೆ 400 ದಾಟಿದ್ದು,  ದೆಹಲಿ ಮತ್ತು ಮುಂಬೈನಲ್ಲಿಯೇ ಹೆಚ್ಚಿನ ಪ್ರಕರಣಗಳು ಕಾಣಿಸಿಕೊಂಡಿವೆ.

ಇದೀಗ ಒಮಿಕ್ರಾನ್ ತಡೆಗೆ ಮಹಾರಾಷ್ಟ್ರ ಸರ್ಕಾರ ಕೆಲವು ನಿಯಮಗಳನ್ನು ಜಾರಿಗೊಳಿಸಿದ್ದು, ಇನ್ನು ಮುಂದೆ ಸಂಜೆ 9ಗಂಟೆಯಿಂದ ಬೆಳಗ್ಗೆ 6ಗಂಟೆವರೆಗೆ, 5 ಅಥವಾ ಅದಕ್ಕಿಂತ ಹೆಚ್ಚಿನ ಜನರು ಸಾರ್ವಜನಿಕ ಸ್ಥಳಗಳಲ್ಲಿ ಗುಂಪುಗೂಡುವಂತಿಲ್ಲ.

ಹೊಸ ವರ್ಷ ಆಚರಣೆಗೆ ಇನ್ನು ಒಂದು ವಾರಗಳಷ್ಟೆ ಬಾಕಿ ಇರುವಾಗ ಮಹಾರಾಷ್ಟ್ರ ಸರ್ಕಾರ ಹೊಸ ಮಾರ್ಗಸೂಚಿ ಬಿಡುಗಡೆ ಮಾಡಿದೆ. ಇನ್ನು ಮುಂದೆ ಒಳಾಂಗಣ ಮದುವೆಗಳಲ್ಲಿ 100 ಮಂದಿ ಮಾತ್ರ ಪಾಲ್ಗೊಳ್ಳಬಹುದು. ಹೊರಾಂಗಣದಲ್ಲಿ ನಡೆಯುವ ಮದುವೆಯಲ್ಲಿ ಗರಿಷ್ಠ 250 ಜನರು ಮಾತ್ರ ಭಾಗವಹಿಸಬಹುದು. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ