ಭಾರತಕ್ಕೆ ಎಚ್ಚರಿಕೆಯ ಗಂಟೆಯಾಯ್ತ!?

ಗುರುವಾರ, 6 ಜನವರಿ 2022 (08:25 IST)
ಆಸ್ಟ್ರೇಲಿಯಾದಲ್ಲಿ ಇಂದು ದಾಖಲೆ ಮಟ್ಟದಲ್ಲಿ ಕೊರೊನಾ ಕೇಸ್ಗಳು ಕಾಣಿಸಿಕೊಂಡಿವೆ.
 
ಹೀಗಾಗಿ ಆಸ್ಪತ್ರೆಗಳಿಗೆ ದಾಖಲಾಗುವವರ ಸಂಖ್ಯೆ ಹೆಚ್ಚುತ್ತಿದೆ. ತಪಾಸಣಾ ಕೇಂದ್ರಗಳೂ ತುಂಬಿ ತುಳುಕುತ್ತಿವೆ. ಇಡೀ ಆರೋಗ್ಯ ವ್ಯವಸ್ಥೆಯ ಮೇಲೆ ಮತ್ತೆ ಒತ್ತಡ ಉಂಟಾಗುತ್ತಿದೆ. ಇದು ಭಾರತದ ಪಾಲಿಗೂ ಕೂಡ ಎಚ್ಚರಿಕೆಯ ಸಂಕೇತವಾಗಿದೆ.

ಭಾರತದಲ್ಲೂ ಕೂಡ ಇದೀಗ ಕೊವಿಡ್ 19 ಸೋಂಕಿನ ಪ್ರಕರಣಗಳು ಗಣನೀಯವಾಗಿ ಏರಿಕೆಯಾಗುತ್ತಿದ್ದು, ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಹೆಚ್ಚುತ್ತಿದೆ. ಇದು ಕೂಡ ಭಾರತದ ಆರೋಗ್ಯ ವ್ಯವಸ್ಥೆ ಮೇಲೆ ಕೆಟ್ಟ ಪರಿಣಾಮ ಬೀರುವುದನ್ನು ಅಲ್ಲಗಳೆಯುವಂತಿಲ್ಲ.

ಭಾರತದಲ್ಲಿ 2ನೇ ಅಲೆ ಉತ್ತುಂಗಕ್ಕೆ ಏರಿದಾಗ ಆಕ್ಸಿಜನ್, ಬೆಡ್ಗಳ ಕೊರತೆಯಾಗಿತ್ತು. ಅದೇ ಸ್ಥಿತಿ ಮತ್ತೆ ತಲುಪಬಹುದಾದ ಆತಂಕ ಕಾಡುತ್ತಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ