ಮಹಾರಾಷ್ಟ್ರವು ದೈನಂದಿನ ಕೊವಿಡ್ -19 ಪ್ರಕರಣಗಳಲ್ಲಿ ದಾಖಲೆಯ ಏರಿಕೆಯನ್ನು ಕಂಡಿದೆ, ಜನರು ಮತ್ತೊಂದು ಲಾಕ್‌ಡೌನ್ ಅನ್ನು ನಿರೀಕ್ಷಿಸುತ್ತಿದ್ದಾರೆ ಎಂಬುದು ಸ್ಪಷ್ಟವಾಗಿದೆ.
ಆದರೆ, ಕೊವಿಡ್ ಲಾಕ್‌ಡೌನ್‌ಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರವು ಇನ್ನೂ ಯಾವುದನ್ನೂ ಚರ್ಚಿಸಿಲ್ಲ ಎಂದು ಮಹಾರಾಷ್ಟ್ರ ಆರೋಗ್ಯ ಸಚಿವ ರಾಜೇಶ್ ಟೋಪೆ ಸ್ಪಷ್ಟಪಡಿಸಿದ್ದಾರೆ. ಕೇಸ್ ಪಾಸಿಟಿವಿಟಿ ದರ, ಆಸ್ಪತ್ರೆಯ ಬೆಡ್ ಆಕ್ಯುಪೆನ್ಸಿ ಮತ್ತು ಆಮ್ಲಜನಕದ ಬಳಕೆಯನ್ನು ಪರಿಗಣಿಸಿ ನಿರ್ಬಂಧಗಳ ಬಗ್ಗೆ ಸರ್ಕಾರ ನಿರ್ಧಾರ ತೆಗೆದುಕೊಳ್ಳುತ್ತದೆ ಎಂದು ಅವರು ಹೇಳಿದರು.
ದೈನಂದಿನ (ವೈದ್ಯಕೀಯ) ಆಮ್ಲಜನಕದ ಅವಶ್ಯಕತೆ 700 ಮೆಟ್ರಿಕ್ ಟನ್‌ಗಳನ್ನು ದಾಟಿದರೆ, ರಾಜ್ಯದಲ್ಲಿ ಲಾಕ್‌ಡೌನ್ ಆಗಲಿದೆ ಎಂದು ಸಚಿವರು ಪಿಟಿಐ ಸುದ್ದಿ ಸಂಸ್ಥೆಗೆ ತಿಳಿಸಿದರು.
ಇತ್ತೀಚೆಗೆ ವಿಪತ್ತು ನಿರ್ವಹಣಾ ಸಚಿವ ವಿಜಯ್ ವಾಡೆಟ್ಟಿವಾರ್ ಅವರು “ತಾಜಾ ಲಾಕ್‌ಡೌನ್ನ ಹಂತ” ಸಮೀಪಿಸುತ್ತಿದೆ ಎಂದು ಹಿಂದಿನ ದಿನ ಹೇಳಿದ್ದರು, ಆದರೆ ನಿರ್ಧಾರವನ್ನು ಮುಖ್ಯಮಂತ್ರಿ ತೆಗೆದುಕೊಳ್ಳುತ್ತಾರೆ ಎಂದು ಅವರು ಹೇಳಿದ್ದಾರೆ.