ಭಾರತದ ಕೊರೋನಾ ಪ್ರಕರಣ ಸಂಖ್ಯೆ ಹೆಚ್ಚಳ!

ಶನಿವಾರ, 24 ಜುಲೈ 2021 (17:21 IST)
ನವದೆಹಲಿ(ಜು.24): ಮಹಾರಾಷ್ಟ್ರ, ಕರ್ನಾಟಕ, ತೆಲಂಗಾಣ, ಆಂಧ್ರ ಪ್ರದೇಶ ಸೇರಿದಂತೆ ದೇಶದ ಹಲವು ರಾಜ್ಯಗಳಲ್ಲಿ ಭಾರಿ ಮಳೆಯಾಗುತ್ತಿದೆ. ಪ್ರವಾಹ, ಭೂಕುಸಿತ ಸಂಭವಿಸಿದೆ. ಮಹಾರಾಷ್ಟ್ರದಲ್ಲಿ 136ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ. ಈ ಪರಸ್ಥಿತಿ ನಡುವೆ ಭಾರತದ ಆತಂಕ ಮತ್ತೆ ಹೆಚ್ಚಾಗಿದೆ. ಕಾರಣ ದೇಶದಲ್ಲಿ ಕೊರೋನಾ ಪ್ರಕರಣ ಸಂಖ್ಯೆ ಹೆಚ್ಚಾಗಿದೆ.

•ಹಲವು ರಾಜ್ಯಗಳಲ್ಲಿ ಭೀಕರ ಮಳೆ, ಪ್ರವಾಹಕ್ಕೆ ತತ್ತರಿಸಿದ ಜನ
•ಪ್ರವಾಹದ ನಡುವೆ ಭಾರತದ ಕೊರೋನಾ ಸಂಖ್ಯೆ ಹೆಚ್ಚಳ
•ಕೊರೋನಾ ಸಾವಿನ ಸಂಖ್ಯೆಯಲ್ಲೂ ಹಚ್ಚಳ

ಕಳೆದ 24 ಗಂಟೆಯಲ್ಲಿ(ಶನಿವಾರ, ಜುಲೈ 24) ದೇಶದಲ್ಲಿ  39,097 ಹೊಸ ಕೊರೋನಾ ಪ್ರಕರಣಗಳು ಪತ್ತೆಯಾಗಿವೆ. ಇದು ಶುಕ್ರವಾರಕ್ಕಿಂತ ಹೆಚ್ಚಾಗಿದೆ. ಇನ್ನು ಗುಣಮುಖರ ಸಂಖ್ಯೆ 35,087, ಇದು  ಕೊಂಚ ಸಮಾಧಾನ ತಂದಿದೆ. ಇನ್ನು ಕೊರೋನಾ ಸಾವಿನ ಪ್ರಮಾಣದಲ್ಲೂ ಕೊಂಚ ಏರಿಕೆಯಾಗಿದೆ. ಕಳೆದ 24 ಗಂಟೆಯಲ್ಲಿ 546 ಸಾವು ಸಂಭವಿಸಿದೆ.
ಶುಕ್ರವಾರ 35,342 ಹೊಸ ಕೊರೋನಾ ಪ್ರಕರಣ ದಾಖಲಾಗಿದೆ. ಸಾವಿನ ಸಂಖ್ಯೆ 483. ಇನ್ನು ಗುಣಮುಖರ ಸಂಖ್ಯೆ 38,740 . ದೇಶದ ಕೊರೋನಾ ಚೇತರಿಕೆ ಪ್ರಮಾಣ ಶೇಕಡಾ  97.35 ಕ್ಕೆ ಏರಿಕೆಯಾಗಿದೆ. ಭಾರತದಲ್ಲಿ ಒಟ್ಟು ಸಕ್ರೀಯ ಪ್ರಕರಣ ಸಂಖ್ಯೆ 1.31 ರಷ್ಟಿದೆ. ಪ್ರತಿ ದಿನ ಕೊರೋನಾ ಪಾಸಿಟೀವ್ ಪ್ರಕರಣ ಶೇಕಡಾ 2.40 ರಷ್ಟಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ಹೇಳಿದೆ.
ಒಟ್ಟು ಕೊರೋನಾ ಪ್ರಕರಣ : 3,13,32,159
ಗುಣಮುಖರ ಸಂಖ್ಯೆ: 3,05,03,166
ಸಕ್ರೀಯ ಪ್ರಕರಣ: 4,08,977
ಸಾವಿನ ಸಂಖ್ಯೆ: 4,20,016 
ಲಸಿಕೆ : 42,78,82,261

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ