ಇಸ್ಲಾಮಾಬಾದ್ : ಶ್ರೀಲಂಕಾ ಹಾದಿಯಲ್ಲೇ ಸಾಗುತ್ತಿರುವ ಪಾಕಿಸ್ತಾನ ಇದೀಗ ತನ್ನ ದೇಶದ ಜನತೆಗೆ ಮತ್ತೊಂದು ಶಾಕ್ ನೀಡಿದೆ.
ಲೋಡ್ ಶೆಡ್ಡಿಂಗ್ ಕೊರತೆಯಿಂದಾಗಿ ವಿದ್ಯುತ್ ಬಿಕ್ಕಟ್ಟು ಎದುರಿಸುತ್ತಿದ್ದು, ಈ ಬೆನ್ನಲ್ಲೇ ಮೊಬೈಲ್ ಬಳಕೆ ಹಾಗೂ ಇಂಟರ್ನೆಟ್ ಸೇವೆಯನ್ನು ಸ್ಥಗಿತಗೊಳಿಸುವಂತೆ ಎಚ್ಚರಿಕೆ ನೀಡಿದೆ.
ಪಾಕಿಸ್ತಾನದ ರಾಷ್ಟ್ರೀಯ ಮಾಹಿತಿ ತಂತ್ರಜ್ಞಾನ ಮಂಡಳಿ ದೇಶದಲ್ಲಿ ವಿದ್ಯುತ್ ಕಡಿತದ ನಡುವೆ ಮೊಬೈಲ್ ಮತ್ತು ಇಂಟರ್ ನೆಟ್ ಸೇವೆಗಳನ್ನು ಸ್ಥಗಿತಗೊಳಿಸುವ ಬಗ್ಗೆ ಎಚ್ಚರಿಕೆ ನೀಡಿದೆ.
ಪಾಕಿಸ್ತಾನದ ಟೆಲಿಕಾಂ ಆಪರೇಟರ್ಗಳು ದೀರ್ಘಾವಧಿಯ ವಿದ್ಯುತ್ ನಿಲುಗಡೆಯಿಂದಾಗಿ ಮೊಬೈಲ್ ಮತ್ತು ಇಂಟರ್ ನೆಟ್ ಸೇವೆಗಳನ್ನು ಸ್ಥಗಿತಗೊಳಿಸುವ ಬಗ್ಗೆ ಎಚ್ಚರಿಕೆ ನೀಡಿದ್ದಾರೆ. ಏಕೆಂದರೆ ಅತಿಯಾದ ಮೊಬೈಲ್ ಬಳಕೆ ಹಾಗೂ ಇಂಟರ್ನೆಟ್ ಬಳಕೆಯಿಂದಾಗಿ ಟೆಲಿಕಾಂ ಕಾರ್ಯಾಚರಣೆಯಲ್ಲೂ ಸಮಸ್ಯೆಗಳಾಗುತ್ತಿವೆ ಎಂದು ಮಂಡಳಿ ಎಚ್ಚರಿಸಿದೆ.