ಪಾಕಿಸ್ತಾನ ಪ್ರಜೆಗಳಿಗೆ ಮನವಿ ಏನು?

ಗುರುವಾರ, 16 ಜೂನ್ 2022 (08:12 IST)
ಇಸ್ಲಾಮಾಬಾದ್ : ಲಂಕಾ ಬಳಿಕ ಇದೀಗ ಪಾಕಿಸ್ತಾನ ಕೂಡ ದಿವಾಳಿ ಅಂಚು ತಲುಪಿದೆ.

ದೇಶದ ಆಮದು ವೆಚ್ಚ ಕಡಿಮೆ ಮಾಡಲು ಪಾಕಿಸ್ತಾನ ತನ್ನ ಜನರಲ್ಲಿ ಚಹಾ ಕುಡಿಯುವುದನ್ನು ಕಡಿಮೆ ಮಾಡುವಂತೆ ಕೇಳಿಕೊಂಡಿದೆ.

ಟೀ ಸೊಪ್ಪನ್ನು ಆಮದು ಮಾಡಿಕೊಳ್ಳುವ ದೇಶಗಳಲ್ಲಿ ಪಾಕಿಸ್ತಾನ ಅಗ್ರ ಸ್ಥಾನದಲ್ಲಿದ್ದು, ಇದೀಗ ದೇಶದ ಆರ್ಥಿಕ ಪರಿಸ್ಥಿತಿ ಮತ್ತಷ್ಟು ಕುಸಿಯದಿರಲು ಟೀ ಸೇವನೆ ಕಡಿಮೆ ಮಾಡಿ ಎಂದು ಪಾಕ್ ಸರ್ಕಾರ, ಜನರಲ್ಲಿ ಮನವಿ ಮಾಡಿಕೊಂಡಿದೆ. 

ಕಳೆದ ವರ್ಷ ಪಾಕಿಸ್ತಾನ 5,000 ಕೋಟಿ ರೂ.ಗೂ ಅಧಿಕ ಮೌಲ್ಯದ ಟೀ ಸೊಪ್ಪನ್ನು ಆಮದು ಮಾಡಿಕೊಂಡಿತ್ತು. ಜನರು ಟೀ ಕುಡಿಯುವುದನ್ನು ಕಡಿಮೆ ಮಾಡಿದರೆ, ಆಮದು ಖರ್ಚು ಕಡಿಮೆ ಆಗಲಿದೆ ಎಂದು ಪಾಕಿಸ್ತಾನದ ಯೋಜನಾ ಸಚಿವ ಆಶ್ಸಾನ್ ಇಕ್ಬಾಲ್ ಹೇಳಿದ್ದಾರೆ.

ನಾವು ಸಾಲ ಮಾಡಿ ಚಹಾವನ್ನು ಆಮದು ಮಾಡಿಕೊಳ್ಳುತ್ತಿದ್ದೇವೆ. ಹೀಗಾಗಿ ಪ್ರತಿ ದಿನ ಚಹಾ ಕುಡಿಯುವುದನ್ನು 1-2 ಲೋಟದಷ್ಟು ಕಡಿಮೆ ಮಾಡುವಂತೆ ದೇಶದ ಜನರಲ್ಲಿ ಮನವಿ ಮಾಡುತ್ತೇನೆ ಎಂದು ಇಕ್ಬಾಲ್ ಹೇಳಿದ್ದಾರೆ. ಆದರೆ ಈ ಹೇಳಿಕೆಗೆ ಪಾಕ್ ಪ್ರಜೆಗೆಳು ಸಿಟ್ಟಾಗಿದ್ದಾರೆ. 

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ