ಕುಮಾರಸ್ವಾಮಿಯಿಂದ ರಾಜಕೀಯ ಪಾಠ ಕಲಿಯಬೇಕಾಗಿಲ್ಲ - ಸಿಎಂ ಸಿದ್ದರಾಮಯ್ಯ ತಿರುಗೇಟು
ಶನಿವಾರ, 10 ಮಾರ್ಚ್ 2018 (12:12 IST)
ಮೈಸೂರು : ಒಕ್ಕಲಿಗ ಅಧಿಕಾರಿಗಳ ಟಾರ್ಗೆಟ್ ಎಂಬ ಹೆಚ್.ಡಿ.ಕುಮಾರ ಸ್ವಾಮಿ ಅವರ ಆರೋಪ ವಿಚಾರಕ್ಕೆ ಮೈಸೂರಿನಲ್ಲಿ ಶನಿವಾರ (ಇಂದು) ಸಿಎಂ ಸಿದ್ದರಾಮಯ್ಯ ಅವರು ತಿರುಗೇಟು ನೀಡಿದ್ದಾರೆ.
ಈ ಬಗ್ಗೆ ಮಾತನಾಡಿದ ಸಿಎಂ ಅವರು, ‘ಕುಮಾರಸ್ವಾಮಿಯಿಂದ ರಾಜಕೀಯ ಪಾಠ ಕಲಿಯಬೇಕಾ? ಅವರು ರಾಜಕೀಯಕ್ಕೆ ಬರೋ ಮೊದಲೇ ನಾನು ಮಂತ್ರಿಯಾಗಿದ್ದೆ. ಚುನಾವಣೆ ಸಂದರ್ಭದಲ್ಲಿ ಏನೇನೋ ಸುಳ್ಳು ಹೇಳುತ್ತಾರೆ. ಅಧಿಕಾರಿಗಳ ಜೊತೆ ಹೇಗಿರಬೇಕೆಂದು ಕುಮಾರಸ್ವಾಮಿಯಿಂದ ಕಲಿಯಬೇಕಿಲ್ಲ. ಅವರಿಗಿಂತ ಮುಂಚೆಯೇ ನಾನು ರಾಜಕೀಯ ಮಾಡಿದ್ದೇನೆ’ ಎಂದು ಹೆಚ್.ಡಿ.ಕುಮಾರ ಸ್ವಾಮಿ ಅವರ ಹೆಳಿಕೆಗೆ ತಿರುಗೇಟು ಕೊಟ್ಟಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ