ಬೆಂಗಳೂರಿನಲ್ಲಿ ಡೆಲ್ಟಾ ಸೇರಿ AY.4 ಮತ್ತು AY.12 ರೂಪಾಂತರಿ ವೈರಸ್ ಪತ್ತೆ!
ಶುಕ್ರವಾರ, 17 ಸೆಪ್ಟಂಬರ್ 2021 (13:09 IST)
ಬೆಂಗಳೂರು : ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಕೊರೊನಾ 3 ನೇ ಅಲೆ ಭೀತಿ ನಡುವೆಯೇ ಇದೀಗ ಕೊರೊನಾ ಸೋಂಕಿನ ಡೆಲ್ಟಾ ಸೇರಿ 3 ವಂಶಾವಳಿಗಳು ಪತ್ತೆಯಾಗಿವೆ ಎಂದು ವರದಿಯಾಗಿದೆ.
ಬೆಂಗಳೂರಿನಲ್ಲಿ ಕೋವಿಡ್ -19 ಸೋಂಕಿತ ಜನರ ಜೀನೋಮಿಕ್ ಸೀಕ್ವೆನ್ಸಿಂಗ್ಗಾಗಿ ಕಳುಹಿಸಲಾದ ಕೋವಿಡ್ -19 ಮಾದರಿಗಳನ್ನು ಸಂಸ್ಕರಿಸಿದ ಸಂಶೋಧಕರು ಡೆಲ್ಟಾ ಮತ್ತು ಅದರ ಉಪವರ್ಗಗಳಾದ AY.4 ಮತ್ತು AY.12 ಹೆಚ್ಚಾಗಿದೆ ಎಂದು ಕಂಡುಕೊಂಡಿದ್ದಾರೆ.
ಮಕ್ಕಳಲ್ಲಿ ಇದು ಹೆಚ್ಚಾಗಿ ಕಂಡು ಬಂದಿದ್ದು, ಬಿಬಿಎಂಪಿ ಸಹಾಯ ದಿಂದ ಒಟ್ಟು 384 ಮಾದರಿಗಳನ್ನು ಸಂಗ್ರಹಿಸಲಾಗಿತ್ತು. ಈ ಮಾದರಿಗಳನ್ನು ಜೀನೋಮ್ ಸೀಕ್ವೆನ್ಸ್ ಮಾಡಿದಾಗ ಈ ಫಲಿತಾಂಶಗಳು ವರದಿಯಾಗಿವೆ. ಮಕ್ಕಳು, ಲಸಿಕೆ ಹಾಕಿಸಿಕೊಂಡ ವ್ಯಕ್ತಿಗಳು ಮತ್ತು ಇನ್ನೂ ಲಸಿಕೆ ಹಾಕಿಸಿಕೊಂಡವರಲ್ಲಿ ಅದೇ ವಂಶಾವಳಿಗಳನ್ನು ಗುರುತಿಸಲಾಗಿದೆ ಎಂದು ವರದಿಯಲ್ಲಿ ತಿಳಿದುಬಂದಿದೆ ಎನ್ನಲಾಗಿದೆ.