ಶಬರಿಮಲೆಯಲ್ಲಿ ಮಹಿಳೆಯರಿಗಾಗಿ ಕೇರಳ ಸರ್ಕಾರ ನೀಡುತ್ತಿರುವ ಆಫರ್ ಗಳೇನೇನು ಗೊತ್ತಾ?

ಮಂಗಳವಾರ, 2 ಅಕ್ಟೋಬರ್ 2018 (06:34 IST)
ತಿರುವನಂತಪುರಂ: ಶಬರರಿ ಮಲೆ ದೇಗುಲಕ್ಕೆ ಇನ್ನು ಮುಂದೆ ಮಹಿಳೆಯರೂ ಪ್ರವೇಶಿಸಬಹುದು ಎಂದು ಸುಪ್ರೀಂಕೋರ್ಟ್ ಏನೋ ತೀರ್ಪು ನೀಡಿದೆ. ಇದಾದ ಬಳಿಕ ಮಹಿಳೆಯರಿಗಾಗಿ ಕೇರಳ ಸರ್ಕಾರ ಏನೇನು ಕ್ರಮಕೈಗೊಳ್ಳುತ್ತಿದೆ ಗೊತ್ತಾ?

ತೀರ್ಪು ಹೊರ ಬಿದ್ದ ಬಳಿಕ ಅದನ್ನು ಸ್ವಾಗತಿಸಿದ್ದ ಕೇರಳ ಸರ್ಕಾರ ಈಗ ದೇಗುಲ ಸಂದರ್ಶನಕ್ಕೆ ಬರುವ ಮಹಿಳೆಯರ ಸುರಕ್ಷತೆಗಾಗಿ ಕ್ರಮ ಕೈಗೊಳ್ಳಲು ಮುಂದಾಗಿದೆ. ಈಗಾಗಲೇ ಶಬರಿಮಲೆ ದೇವಾಲಯ ಆಡಳಿತ ಮಂಡಳಿಯೊಂದಿಗೆ ಸಭೆ ನಡೆಸಿರುವ ಕೇರಳ ಸಿಎಂ ಪಿಣರಾಯಿ ವಿಜಯನ್ ಏನೇನು ಕ್ರಮ ಕೈಗೊಳ್ಳಬಹುದೆಂದು ಪಟ್ಟಿ ಮಾಡಿದ್ದಾರೆ.

ಈಗಾಗಲೇ ಪಂಪಾ ನದಿ ಬಳಿ ಮಹಿಳೆಯರಿಗಾಗಿ ಸ್ನಾನ ಘಟ್ಟಗಳಿವೆ. ಅದನ್ನು ಇನ್ನಷ್ಟು ವಿಸ್ತರಿಸುವ ಗುರಿ ಸರ್ಕಾರಕ್ಕಿದೆ. ಇನ್ನು ಕಾಡಿನ ಮಧ್ಯೆ ಯಾತ್ರೆ ನಡೆಸುವಾಗ ಮಹಿಳೆಯರ ಸುರಕ್ಷತೆಗಾಗಿ ಲೈಟಿಂಗ್ ವ್ಯವಸ್ಥೆ ಸುಧಾರಣೆ, ಪರಿಸರ ಸ್ನೇಹಿ ಶೌಚಾಲಯ ವ್ಯವಸ್ಥೆ ನಿರ್ಮಾಣ ಮಾಡಲು ಸರ್ಕಾರ ಮುಂದಾಗಿದೆ. ಇನ್ನು, ದೇವಾಲಯದಲ್ಲೂ ಮಹಿಳೆಯರಿಗಾಗಿ ಪ್ರತ್ಯೇಕ ಕ್ಯೂ ವ್ಯವಸ್ಥೆ ಇತ್ಯಾದಿ ವ್ಯವಸ್ಥೆ ಮಾಡುವ ಉದ್ದೇಶವನ್ನೂ ಸರ್ಕಾರ ಹೊಂದಿದೆ. ಅಂತೂ ಮಹಿಳೆಯರ ಸ್ವಾಗತಕ್ಕೆ ಸರ್ಕಾರವೇನೋ ಕ್ರಮ ಕೈಗೊಳ್ಳುತ್ತಿದೆ. ಆದರೆ ಶತಮಾನಗಳ ಸಂಪ್ರದಾಯ ಮೀರಿ ಎಷ್ಟು ಮಹಿಳೆಯರು ಶಬರಿಮಲೆ ಯಾತ್ರೆ ಕೈಗೊಳ್ಳುತ್ತಾರೋ ಕಾದು ನೋಡಬೇಕು.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ