ಚುನಾವಣೆ ಆಯೋಗಕ್ಕೆ ಸೆಡ್ಡು ಹೊಡೆದ ಕೆ.ಎಸ್.ಈಶ್ವರಪ್ಪ

ಭಾನುವಾರ, 1 ಏಪ್ರಿಲ್ 2018 (14:45 IST)
ನಮ್ಮ ದುಡ್ಡಲ್ಲಿ ಪಕ್ಷದ ಕಾರ್ಯಕರ್ತರಿಗೆ ಅಭಿಮಾನಿಗಳಿಗೆ ಊಟ ಕೊಟ್ಟರೆ ಚುನಾವಣೆ ಆಯೋಗಕ್ಕೆ ಏನ್ ಸಮಸ್ಯೆ, ಲೆಕ್ಕ ಕೊಡಲು ನಾವು ಸಿದ್ದರಾಗಿದ್ದೇವೆ ಎಂದು ಬಿಜೆಪಿ ಹಿರಿಯ ಮುಖಂಡ ಕೆ.ಎಸ್.ಈಶ್ವರಪ್ಪ ಚುನಾವಣಾ ಅಧಿಕಾರಿಗಳ ವಿರುದ್ಧ ಗರಂ ಆಗಿದ್ದಾರೆ.
ಪರಿಷತ್ ವಿಪಕ್ಷ ನಾಯಕ ಕೆ.ಎಸ್. ಈಶ್ವರಪ್ಪ ಸುದ್ದಿಗೋಷ್ಠಿ ನಡೆಸಿ, ಚುನಾವಣಾ ಅಧಿಕಾರಿಗಳು ಚುನಾವಣ ವೆಚ್ಚ ಎಷ್ಟಿರಬೇಕು ಎಂದು ಈಗಾಗಲೇ ಹೇಳಿದ್ದಾರೆ. ಕಾಗಿನೆಲೆಯಲ್ಲಿ 3 ನೇ ತಾರೀಕ್ ಹಿಂದುಳಿದ ವರ್ಗದ ಸಮಾವೇಶ ನಡೆಯಲಿದೆ. 3 ರಿಂದ 5 ಲಕ್ಷ ಮಂದಿ ಸಮಾವೇಶದಲ್ಲಿ ಸೇರಲಿದ್ದಾರೆ
ಮಜ್ಜಿಗೆ ಕೊಡಲು ಅಬ್ಯಂತರವಿಲ್ಲ ಆದರೆ ಆದರೆ ಊಟ ಕೊಟ್ಟರೆ ಅಡುಗೆ ಸಾಮಾಗ್ರಿ ಸೀಜ್ ಮಾಡಲಾಗುವುದು ಎಂದು ಹೇಳಿದ್ದಾರೆ
 
ನಮ್ಮ ದುಡ್ಡಲ್ಲಿ ಊಟ ಕೊಟ್ಟರೆ ಚುನಾವಣಾ ಆಯೋಗಕ್ಕೆ ಏನು ಸಮಸ್ಯೆ.? ನಾಳೆ 11 ಗಂಟೆ ಒಳಗೆ ಅನುಮತಿ ಕೊಟ್ಟರೆ ಒಳ್ಳೆಯದು ಅನುಮತಿ ಕೊಡದಿದ್ರೆ, ಹಾವೇರಿ ಚುನಾವಣಾ ಆಯೋಗದ ಕಚೇರಿ ಮುಂದೆ ಧರಣಿ ಮಾಡುತ್ತೇನೆ ಎಂದು ಗುಡುಗಿದ್ದಾರೆ.
 
ನಾವು ಮಾಡಿದ ಖರ್ಚಿಗೆ ಲೆಕ್ಕ ಕೊಡಲಿದ್ದೇವೆ. ನ್ಯಾಯ ಸಮ್ಮತ ಚುನಾವಣೆ ನಡೆಯಬೇಕು, ಆದರೆ ಸಮಾವೇಶಕ್ಕೆ ಬಂದವರಿಗೆ ಊಟ ಕೊಡಬಾರದು ಅನ್ನುವ ಧೋರಣೆ ಸರಿಯಲ್ಲ. ಈ ಧೋರಣೆಯನ್ನು ಬದಲಿಸಬೇಕು ಎನ್ನುವುದು ನಮ್ಮ ಒತ್ತಾಯ ಎಂದರು.
 
ನಾನು ಧರಣಿ ಕೂತ ನಂತರ ಒಂದು ನಾನು ಮಾಡಿದ್ದು ತಪ್ಪು ಎಂದು ಗೊತ್ತಾಗಲಿದೆ ಅಥವಾ ಚುನಾವಣಾ ಅಯೋಗ ತನ್ನ ನಿರ್ಧಾರ ಬದಲಿಸಿಕೊಳ್ಳಲಿದೆ
ಚುನಾವಣೆ ಆಯೋಗ ಮಜ್ಜಿಗೆ ಕೊಡಿ ಎಂದು ಹೇಳುತ್ತಿದೆ, ಆದ್ರೆ ಮಜ್ಜಿಗೆಗೆ ಖರ್ಚಾಗುವುದಿಲ್ಲವಾ ? ಪರೋಕ್ಷವಾಗಿ ಖರ್ಚುಮಾಡುವುದಕ್ಕೆ ಬೆಂಬಲ ಕೊಟ್ಟಂತಾಗುವುದಿಲ್ಲವಾ ? ಎಂದು ತಿರುಗೇಟು ನೀಡಿದರು.
 
ಖಾಸಗಿ ಕಟ್ಟಡದ ಮೇಲೆ ಇರುವ ಪ್ರಚಾರ ಫಲಕಗಳನ್ನು ಅಳಿಸಲಾಗುತ್ತಿದೆ. ಇದು ಸರಿಯಲ್ಲ. ರುದ್ರೆಗೌಡರು ಶಿವಮೊಗ್ಗ ಬಿಜೆಪಿ ಜಿಲ್ಲಾಧ್ಯಕ್ಷರ ಸ್ಥಾನಕ್ಕೆ ರಾಜೀನಾಮೆ ಕೊಡುವ ವಿಚಾರ ನನಗೆ ಗೊತ್ತಿಲ್ಲ ರುದ್ರೆಗೌಡರನ್ನೆ ಕೇಳಿ ಎಂದು ಹಿರಿಯ ಬಿಜೆಪಿ ಮುಖಂಡ ಈಶ್ವರಪ್ಪ ತಿಳಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ