13 ಕೈ ಶಾಸಕರು ಬಿಜೆಪಿಗೆ? ಕುಮಾರಸ್ವಾಮಿ ಸರ್ಕಾರ ಉರುಳುತ್ತಾ?
ಮಂಗಳವಾರ, 11 ಸೆಪ್ಟಂಬರ್ 2018 (10:07 IST)
ಬೆಂಗಳೂರು: ರಾಜ್ಯದ ಸಮ್ಮಿಶ್ರ ಸರ್ಕಾರವನ್ನು ಉರುಳಿಸುವ ಬಿಜೆಪಿ ಪ್ರಯತ್ನ ಮುಂದುವರಿದಿದ್ದು, 13 ಕಾಂಗ್ರೆಸ್ ಶಾಸಕರಿಗೆ ಗಾಳ ಹಾಕಿದೆ ಎನ್ನಲಾಗಿದೆ.
13 ಕಾಂಗ್ರೆಸ್ ಶಾಸಕರು ಮತ್ತು ಒಬ್ಬ ಪಕ್ಷೇತರ ಶಾಸಕರನ್ನು ಬಿಜೆಪಿ ತನ್ನತ್ತ ಸೆಳೆಯಲು ಪ್ರಯತ್ನ ನಡೆಸಿದೆ ಎನ್ನಲಾಗಿದೆ. ಸದ್ಯಕ್ಕೆ ವಿಧಾನಸಭೆ ಸಂಖ್ಯಾಬಲ 222 ಇದ್ದು, ಒಂದು ವೇಳೆ 13 ಕಾಂಗ್ರೆಸ್ ಶಾಸಕರು ಕೈ ಕೊಟ್ಟರೆ ಇದು 208 ಕ್ಕೆ ಇಳಿಕೆಯಾಗಲಿದೆ.
ಅಷ್ಟೇ ಅಲ್ಲದೆ, ಈಗ ಕಾಂಗ್ರೆಸ್-ಜೆಡಿಎಸ್ ಶಾಸಕರ ಸಂಖ್ಯೆ 118 ಆಗಿದ್ದು, ಕಾಂಗ್ರೆಸ್ ಶಾಸಕರು ಪಕ್ಷ ತೊರೆದರೆ ಇದು 108 ಕ್ಕೆ ಇಳಿಕೆಯಾಗಲಿದೆ. ಒಂದು ವೇಳೆ ವಿಧಾನಸಭೆ ಸಂಖ್ಯಾಬಲ 208 ಕ್ಕೆ ಇಳಿಕೆಯಾದರೆ ಆಗ ಬಹುಮತಕ್ಕೆ 105 ಸ್ಥಾನ ಸಿಕ್ಕರೆ ಸಾಕು. ಈ ವೇಳೆ ಪಕ್ಷೇತರ ಶಾಸಕ ಬಿಜೆಪಿಗೆ ಬೆಂಬಲ ಕೊಟ್ಟರೂ ಅದು ಕಮಲ ಪಕ್ಷಕ್ಕೆ ಅಧಿಕಾರ ಹಿಡಿಯಲು ಸುಲಭವಾಗಲಿದೆ. ಅಂತೂ ರಾಜ್ಯದ ರಾಜಕೀಯ ವಿದ್ಯಮಾನ ಇದೀಗ ಕುತೂಹಲದ ಕೇಂದ್ರ ಬಿಂದುವಾಗಲಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.