ರಾಜ್ಯದ ನಿಯೋಗದೊಂದಿಗೆ ಬಂದ ಎಚ್ ಡಿ ದೇವೇಗೌಡರ ಜತೆ ಪ್ರಧಾನಿ ಮೋದಿ ಜೋಕ್ ಮಾಡಿದ್ದು ಹೀಗೆ!

ಮಂಗಳವಾರ, 11 ಸೆಪ್ಟಂಬರ್ 2018 (08:55 IST)
ನವದೆಹಲಿ: ರಾಜ್ಯದಲ್ಲಿ ಪ್ರವಾಹ ಪೀಡಿತ ಪ್ರದೇಶಗಳ ನೆರವಿಗೆ ಕೇಂದ್ರ ಸರ್ಕಾರಕ್ಕೆ ಮೊರೆಯಿಡಲು ಸಿಎಂ ಕುಮಾರಸ್ವಾಮಿ ನೇತೃತ್ವದಲ್ಲಿ ರಾಜ್ಯದ ನಿಯೋಗ ಪ್ರಧಾನಿ ಮೋದಿಯನ್ನು ಭೇಟಿಯಾಗಿದ್ದು, ಸಕಾರಾತ್ಮಕ ಪ್ರತಿಕ್ರಿಯೆ ಪಡೆದಿದೆ.
 

ಈ ನಡುವೆ ರಾಜ್ಯದ ನಿಯೋಗದ ಜತೆಗೆ ಬಂದ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡರನ್ನು ವಿಶೇಷವಾಗಿ ಆದರಿಸಿ ಪಕ್ಕದಲ್ಲೇ ಕುಳ್ಳಿರಿಸಿದ ಪ್ರಧಾನಿ ಮೋದಿ ಲೈಟಾಗಿ ತಮಾಷೆ ಮಾಡಿದರು. ರಾಜ್ಯದ ನಿಯೋಗದ ಸದಸ್ಯರನ್ನು ನೋಡಿ ‘ನಿಯೋಗದಲ್ಲಿ ಅರ್ಧದಷ್ಟು ಜನ ನಿಮ್ಮ ಕುಟುಂಬದವರೇ ಇದ್ದಾರಲ್ಲ’ ಎಂದು ಕಾಲೆಳೆದರು. ಇದಕ್ಕೆ ದೇವೇಗೌಡರು ನಸುನಗುತ್ತಲೇ ರಾಜ್ಯದ ವಿಷಯವಲ್ಲವೇ ಎಂದು ಸುಮ್ಮನಾದರು ಎನ್ನಲಾಗಿದೆ.

ಈ ಸಂದರ್ಭದಲ್ಲಿ ನೆರೆ ಪೀಡಿತ ಪ್ರದೇಶಗಳ ನೆರವಿಗೆ ಕೇಂದ್ರದಿಂದ 2000 ಕೋಟಿ ರೂ. ಪ್ಯಾಕೇಜ್ ನೀಡುವಂತೆ ಸಿಎಂ ನೇತೃತ್ವದ ನಿಯೋಗ ಪ್ರಧಾನಿ ಮೋದಿಗೆ ಮನವಿ ಮಾಡಿತ್ತು. ಇದಕ್ಕೆ ಪ್ರಧಾನಿ ಮೋದಿ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ.

ಅಷ್ಟೇ ಅಲ್ಲದೆ ಪ್ರಧಾನಿ ಮೋದಿ ಹಾನಿಯಾದ ಪ್ರದೇಶಗಳ ಸಮೀಕ್ಷೆಗೆ ಕೇಂದ್ರದ ನಿಯೋಗ ಕಳುಹಿಸಿಕೊಡುವುದಾಗಿ ಹೇಳಿದೆ.  ಇದೀಗ ಗೃಹ ಸಚಿವಾಲಯದ ಜಂಟಿ ಕಾರ್ಯದರ್ಶಿ ಅನಿಲ್ ಮಲಿಕ್ ನೇತೃತ್ವದ 6 ಸದಸ್ಯರ ನಿಯೋಗ ರಾಜ್ಯಕ್ಕೆ ಇಂದು ಆಗಮಿಸಲಿದೆ. ಈ ನಿಯೋಗ ಕೊಡಗು, ಉಡುಪಿ, ಚಿಕ್ಕಮಗಳೂರು, ದಕ್ಷಿಣ ಕನ್ನಡ ಜಿಲ್ಲೆ ಸೇರಿದಂತೆ ಹಾನಿಯಾದ ಪ್ರದೇಶಗಳಿಗೆ ಭೇಟಿ ಮಾಡಿ ಕೇಂದ್ರಕ್ಕೆ ವರದಿ ಸಲ್ಲಿಸಲಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ