ಕುಮಾರಸ್ವಾಮಿ ಸಂಪುಟದಿಂದ ಕೊಕ್ ಕೊಡಲಿರುವ ಸಚಿವರು ಯಾರೆಲ್ಲಾ ಗೊತ್ತಾ?!
ಹಾಗಿದ್ದರೆ ಸಿಎಂ ತಮ್ಮ ಸಂಪುಟದಿಂದ ಕೈಬಿಡಲಿರುವ ಆ ಸಚಿವರು ಯಾರಿರಬಹುದು? ಕೆಲವೊಂದು ಮೂಲಗಳ ಪ್ರಕಾರ ಕೆಪಿಜೆಪಿ ಪಕ್ಷದ ಸಚಿವ ಶಂಕರ್, ಕಾಂಗ್ರೆಸ್ ನ ಸಿ ಪುಟ್ಟರಂಗಶೆಟ್ಟಿಗೆ ಕೊಕ್ ನೀಡಲಿದ್ದಾರೆ ಎನ್ನಲಾಗಿದೆ.
ಇನ್ನೊಂದು ಮೂಲಗಳ ಪ್ರಕಾರ ಸಚಿವೆ ಜಯಮಾಲಾರನ್ನೂ ಕೈಬಿಡಲು ಒತ್ತಾಯ ಕೇಳಿಬರುತ್ತಿದೆ. ಮೇಲ್ಮನೆ ಸದಸ್ಯೆಯಾಗಿರುವ ಜಯಮಾಲಾ ವಿರುದ್ಧ ಸ್ವಪಕ್ಷೀಯರೇ ದೂರು ನೀಡುತ್ತಿರುವ ಹಿನ್ನಲೆಯಲ್ಲಿ ಅವರನ್ನೂ ಕೈಬಿಡುವ ಸಾಧ್ಯತೆ ಇದೆ ಎನ್ನಲಾಗಿದೆ.