ಕಾಂಗ್ರೆಸ್ನ ಲಕ್ಷ್ಮಿ ಹೆಬ್ಬಾಳ್ಕರ್ ಭಾವಚಿತ್ರ ಇರುವ ಕುಕ್ಕರ್ ತುಂಬಿದ ಲಾರಿಯೊಂದನ್ನು ಇಂದು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ನೀತಿ ಸಂಹಿತೆ ಜಾರಿಯಾದ ನಾಲ್ಕು ದಿನದ ನಂತರ ಕಾಂಗ್ರೆಸ್ ಮಹಿಳಾ ಘಟಕದ ರಾಜ್ಯಾಧ್ಯಕ್ಷೆ, ಬೆಳಗಾವಿ ಗ್ರಾಮೀಣ ಕ್ಷೇತ್ರದ ಆಕಾಂಕ್ಷಿ ಲಕ್ಷ್ಮಿ ಹೆಬ್ಬಾಳ್ಕರ್ ಭಾವಚಿತ್ರ ಇರುವ ಕುಕ್ಕರ್ ಬಾಕ್ಸ್ಗಳ ವಾಹನ ಡಿಸಿ ಬಂಗ್ಲೆ ಎದುರು ಪತ್ತೆಯಾಗಿತ್ತು.
ಆದ್ರಿಂದ ಲಾರಿ ಹೊರಟಿತ್ತು ಬಳಿಕ ಇಬ್ಬರು ಪೊಲೀಸ್ ಇನ್ಸ್ಪೆಕ್ಟರ್ಗಳು ಆಗಮಿಸಿ ವಾಹನವನ್ನು ರಸ್ತೆಯಲ್ಲಿ ತಡೆದರು. ಆ ನಂತರ ಚುನಾವಣಾ ಅಧಿಕಾರಿಗಳು ಆಗಮಿಸಿದರು. ಈ ಸಂದರ್ಭದಲ್ಲಿ ಲಕ್ಷ್ಮಿ ಹೆಬ್ಬಾಳ್ಕರ್ ಸಹೋದರ ಚನ್ನರಾಜ್ ಹಾಗೂ ಅನಿಲ್ ಬೆನಕೆ ನಡುವೆ ವಾಗ್ವಾದ ನಡೆಯಿತು. ಸಿಬ್ಬಂದಿ ತಪಾಸಣೆ ನಡೆಸಿದಾಗ ಕುಕ್ಕರ್‌ಗಳು ಕಂಡು ಬಂದಿದ್ದು, ಅಧಿಕಾರಿಗಳು ವಾಹನವನ್ನು ವಶಕ್ಕೆ ಪಡೆದು ಕೇಸ್ ದಾಖಲಿಸಿಕೊಂಡಿದ್ದಾರೆ.