ಮಕ್ಕಳಿಗೆ ಲಸಿಕೆ ನೀಡುವುದು ಅಷ್ಟೊಂದು ಸೇಫ್ ಅಲ್ವಂತೆ!?

ಶುಕ್ರವಾರ, 31 ಡಿಸೆಂಬರ್ 2021 (17:43 IST)
15 ರಿಂದ 18 ವರ್ಷ ವಯಸ್ಸಿನ ಮಕ್ಕಳಿಗೆ ಕೊರೊನಾವೈರಸ್ ವಿರುದ್ಧದ ಲಸಿಕೆಗಳನ್ನು ಜನವರಿ 3 ರಿಂದ ನೀಡಲಾಗುತ್ತದೆ.
 
ಹೆಚ್ಚುವರಿಯಾಗಿ ಭಾರತ್ ಬಯೋಟೆಕ್ನ ಕೋವ್ಯಾಕ್ಸಿನ್ ಅನ್ನು 12 ರಿಂದ 18 ವಯಸ್ಸಿನ ನಡುವಿನ ಮಕ್ಕಳಿಗೆ ತುರ್ತು ಬಳಕೆಗೆ ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ ಅನುಮೋದಿಸಿದೆ.

ಈ ಸಮಯದಲ್ಲಿ ಅನೇಕ ಪೋಷಕರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದರೆ ಇನ್ನು ಕೆಲವರು ಪೋಷಕರು ವ್ಯಾಕ್ಸಿನ್ನಿಂದ ಮಕ್ಕಳಿಗೆ ಏನಾದರೂ ತೊಂದರೆಯಾದಲ್ಲಿ ಎಂದು ಆತಂಕಕ್ಕೊಳಗಾಗಿದ್ದಾರೆ.

ಇತ್ತೀಚಿನ ಸುದ್ದಿಯ ಪ್ರಕಾರ ಯುಎಸ್ ವೈರಾಲಜಿಸ್ಟ್ ಮತ್ತು ಇಮ್ಯುನಾಲಜಿಸ್ಟ್ ಡಾ. ರಾಬರ್ಟ್ ಮಲೋನ್  ಲಸಿಕೆಗಳು ಮಕ್ಕಳಿಗೆ ಸುರಕ್ಷಿತವಾಗಿಲ್ಲದಿರಬಹುದು ಎಂಬ ಹೇಳಿಕೆ ನೀಡಿದ್ದಾರೆ. ಇದರಿಂದ ಪೋಷಕರು ಪ್ರತಿಯೊಬ್ಬರೂ ಆತಂಕಕ್ಕೊಳಗಾಗಿದ್ದಾರೆ. ಈ ಕುರಿತು ಇನ್ನಷ್ಟು ವಿವರಗಳನ್ನು ತಿಳಿದುಕೊಳ್ಳೋಣ.

ಯುಎಸ್ ವೈರಾಲಜಿಸ್ಟ್ ಮತ್ತು ಇಮ್ಯುನಾಲಜಿಸ್ಟ್ ಡಾ. ರಾಬರ್ಟ್ ಮಲೋನ್ ಕೋವಿಡ್-19 ವಿರುದ್ಧ ಮಕ್ಕಳಿಗೆ ಲಸಿಕೆ ನೀಡುವುದರಿಂದ ಉಂಟಾಗುವ ದುಷ್ಪರಿಣಾಮಗಳ ಕುರಿತು ಕೆಲವೊಂದು ಅಂಶಗಳನ್ನು ಹಂಚಿಕೊಂಡಿದ್ದಾರೆ.

mRNA ಲಸಿಕೆಗಳ ಅನ್ವೇಷಕ ಎಂಬುದಾಗಿ ಮಲೋನ್ ಈ ಹಿಂದೆ ಹೇಳಿಕೊಂಡಿದ್ದರು ಹಾಗೂ ಇದೇ ರೀತಿಯ ಹಲವಾರು ತಪ್ಪು ಮಾಹಿತಿಗಳ ಕುರಿತು ಸಂದೇಹಗಳನ್ನು ಹುಟ್ಟುಹಾಕಿರುವುದರಿಂದ ಮಲೋನ್ರನ್ನು ಲಸಿಕೆ ಸಂದೇಹವಾದಿ ಎಂದು ಕೂಡ ಕರೆಯಲಾಗುತ್ತದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ