ಮಾವಿನ ಹಣ್ಣು ಅಕಾಲಿಕ ಮಳೆಗೆ ಬಾರದ ಫಸಲು, ಬೆಲೆ ಗಗನಕ್ಕೆ!
ಹೌದು. ಈ ಬಾರಿ ಮಾವಿನ ಹಣ್ಣಿನ ಮೇಲೆ ಪ್ರಕೃತಿ ಮುನಿಸಿಕೊಂಡಿದೆ. ನವೆಂಬರ್ ನಲ್ಲಾದ ಅಕಾಲಿಕ ಮಳೆಯಿಂದಾಗಿ ಮಾವಿನ ಫಸಲು ಕೈಗೆ ಬರುವುದು ಕೊಂಚ ವಿಳಂಬವಾಗಿದೆ.
ಪ್ರತಿ ವರ್ಷ ಮಾರ್ಚ್ ಕೊನೆ ಏಪ್ರಿಲ್ ಮೊದಲವಾರದಲ್ಲಿ ಮಾವು ಮಾರುಕಟ್ಟೆಗೆ ಬರುತ್ತಿತ್ತು. ಆದರೆ ಈ ಬಾರಿ ಏಪ್ರಿಲ್ಗೆ ಕೆಲವೇ ದಿನ ಬಾಕಿ ಇದ್ದರೂ ಮಾವು ಮಾರುಕಟ್ಟೆಗೆ ಬಂದಿಲ್ಲ. ಹೀಗಾಗಿ ಏಪ್ರಿಲ್ ಅಂತ್ಯಕ್ಕೆ ಮಾವು ಸವಿಯಲು ಸಿಗಬಹುದು.
ಈ ಬಾರಿ ಕೇವಲ ಶೇ.40ರಿಂದ 50ರಷ್ಟು ಇಳುವರಿ ಬರಬಹುದು ಅಂತಾ ಮಾವು ನಿಗಮದ ತಾಂತ್ರಿಕ ಸಮಿತಿ ಅಂದಾಜಿಸಿದೆ.
ಈ ವರ್ಷ ಕರ್ನಾಟಕದಲ್ಲಿ ಕೇವಲ 8 ಲಕ್ಷ ಮೆಟ್ರಿಕ್ ಟನ್ ಮಾವು ಬರುವ ಅಂದಾಜಿದೆ. ಮೇ ತಿಂಗಳಲ್ಲಿ ಹೆಚ್ಚಿನ ಮಾವು ಬರಬಹುದು. ಮಾವಿನ ಇಳುವರಿ ಕಡಿಮೆಯಾಗುವುದರಿಂದ ಬೆಲೆ ಸಹ ಹೆಚ್ಚಾಗಲಿದೆ ಅಂತಾ ಹೇಳಲಾಗುತ್ತಿದೆ.