ಬೆಂಗಳೂರು : ಚುನಾವಣೋತ್ತರ ಸಮೀಕ್ಷೆಗಳಲ್ಲಿ ಕಾಂಗ್ರೆಸ್ಗೆ ಬಹುಮತದ ಸುಳಿವು ಸಿಗುತ್ತಿದ್ದಂತೆಯೇ ಪಕ್ಷದಲ್ಲಿ ನಾನಾ ಲೆಕ್ಕಾಚಾರ ಶುರುವಾಗಿದೆ. ಆಂತರಿಕವಾಗಿ ಸಿಎಂ ಹುದ್ದೆಗೆ ಪೈಪೋಟಿ ಶುರುವಾಗಿದೆ.
ಸಿಎಂ ಕುರ್ಚಿ ಕನಸು ಕಂಡ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ತಮ್ಮದೇ ಆದ ಲೆಕ್ಕಾಚಾರಕ್ಕೆ ಮುಂದಾದಂತೆ ಕಾಣುತ್ತಿದೆ. ಸಿದ್ದರಾಮಯ್ಯಗೆ ಶಾಸಕರ ಬೆಂಂಬಲದ ವಿಶ್ವಾಸವಾದರೆ, ಡಿಕೆಶಿಗೆ ಹೈಕಮಾಂಡ್ ಮೇಲೆ ಅಪಾರವಾದ ನಂಬಿಕೆ. ಸಿದ್ದರಾಮಯ್ಯಗೆ ನೂತನ ಶಾಸಕರ ಬೆಂಬಲದ ವಿಶ್ವಾಸವಿದ್ದು, ಅದೇ ಕಾರಣಕ್ಕೆ 2013ರ ಫಲಿತಾಂಶದ ನಿರೀಕ್ಷೆಯಲ್ಲಿ ಇದ್ದಾರೆ ಎನ್ನಲಾಗಿದೆ.
ಕೆಪಿಸಿಸಿ (ಏPಅಅ) ಅಧ್ಯಕ್ಷರನ್ನ ಸಿಎಂ ಮಾಡುವ ಸಂಪ್ರದಾಯ ಕಾಂಗ್ರೆಸ್ನಲ್ಲಿದೆ. ಅದು ತಮ್ಮ ಕೈ ಹಿಡಿಯುತ್ತದೆ ಎಂಬ ನಿರೀಕ್ಷೆಯಲ್ಲಿ ಡಿಕೆಶಿ ಇದ್ದಾರೆ. ಎಕ್ಸಿಟ್ ಪೋಲ್ ಆಧರಿಸಿ ಸಿಎಂ ಕುರ್ಚಿ ಕದನದಲ್ಲಿ ತಮ್ಮದೇ ಆದ ಲೆಕ್ಕಾಚಾರದಲ್ಲಿ ಉಭಯ ನಾಯಕರು ಇದ್ದಾರೆ.