ಅಪ್ರಾಪ್ತ ಬಾಲಕನ ಮತಾಂತರ, 2 ಮಕ್ಕಳ ತಾಯಿಯೊಂದಿಗೆ ವಿವಾಹ!

ಬುಧವಾರ, 25 ಮೇ 2022 (14:28 IST)
ಕಾನ್ಪುರ : ಅಪ್ರಾಪ್ತ ಬಾಲಕನೋರ್ವನನ್ನು ಬಲವಂತವಾಗಿ ಮತಾಂತರಗೊಳಿಸಿ,
 
 ಆತನಿಗಿಂತ ಎರಡು ಪಟ್ಟು ಪ್ರಾಯದಲ್ಲಿ ಹೆಚ್ಚಿರುವ ಎರಡು ಮಕ್ಕಳ ತಾಯಿಯೊಂದಿಗೆ ಮದುವೆ ಮಾಡಿಸಿದ ಘಟನೆ ಉತ್ತರಪ್ರದೇಶದ ಕಾನ್ಪುರದಲ್ಲಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
 
16 ವರ್ಷ ವಯಸ್ಸಿನ ಅಪ್ರಾಪ್ತ ಬಾಲಕನನ್ನು ಇಸ್ಲಾಂಗೆ ಬಲವಂತವಾಗಿ ಮತಾಂತರಿಸಿ ನಂತರ ಕಾನ್ಪುರದಲ್ಲಿ ತನ್ನ ಎರಡು ಪಾಲು ಹೆಚ್ಚಿನ ವಯಸ್ಸಿನ ಮಹಿಳೆಯೊಂದಿಗೆ ಮದುವೆ ಮಾಡಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. 
 
ಪ್ರಕರಣಕ್ಕೆ ಸಂಬಂಧಿಸಿದಂತೆ ಬಜರಂಗದಳ ಮತ್ತು ವಿಶ್ವ ಹಿಂದೂ ಪರಿಷತ್ ಮಧ್ಯಸ್ಥಿಕೆ ಮೇರೆಗೆ ಎಫ್ಐಆರ್ ದಾಖಲಿಸಲಾಗಿದೆ. ಅಪ್ರಾಪ್ತನನ್ನು ವಿವಾಹವಾದ ಮಹಿಳೆ, ಆಕೆಯ ಪೋಷಕರು ಮತ್ತು 'ನಿಕಾಹ್'(ಮದುವೆ) ಮಾಡಿದ ಮೌಲ್ವಿ ಅವರನ್ನು ಪೊಲೀಸರು ಬಂಧಿಸಿದ್ದಾರೆ.
 
ಈ ಅಪ್ರಾಪ್ತ ಬಾಲಕನ ತಾಯಿ ಈ ಬಗ್ಗೆ ಮಾತನಾಡಿದ್ದು, ತನ್ನ ಮಗ ಹಾಗೂ ತಾನು ಕಾಕಡಿಯೊ ಪ್ರದೇಶದಲ್ಲಿ ವಾಸಿಸುತ್ತಿದ್ದೇವೆ. ಅದು ಹೇಗೋ ಆತನಿಗೆ (ಮಗನಿಗೆ) ಜಜ್ಮೌ ಪ್ರದೇಶದಲ್ಲಿ ವಾಸಿಸುವ ಮುಸ್ಲಿಂ ಕುಟುಂಬದೊಂದಿಗೆ ಸಂಪರ್ಕ ಬೆಳೆದಿದೆ. 
 
ಮೇ 22 ರಂದು ನನ್ನ ಪುತ್ರ ನಾಪತ್ತೆಯಾಗಿದ್ದ. ಇದಾದ ಬಳಿಕ ಎಲ್ಲಿಂದಲ್ಲೋ ಬಂದ ವಿಡಿಯೋವೊಂದರಲ್ಲಿ ನನ್ನ ಮಗ ಮದುವೆಯಾಗಿರುವುದು ತಿಳಿದು ಬಂತು ಎಂದು ಮಹಿಳೆ ಹೇಳಿದ್ದಾಳೆ. 
 
ಮೌಲ್ವಿ ಮದುವೆಗೂ ಮೊದಲು ಹುಡುಗನನ್ನು ಮತಾಂತರಿಸುತ್ತಿರುವುದು ಮತ್ತು ನಂತರ ಆತನೊಂದಿಗೆ ಮದುವೆಗೆ ಸಂಬಂಧಿಸಿದ ಇತರ ಆಚರಣೆಗಳನ್ನು ಮಾಡುತ್ತಿರುವುದನ್ನು ವೀಡಿಯೊ ತೋರಿಸುತ್ತಿದೆ. ಬಾಲಕನನ್ನು ಬಲವಂತವಾಗಿ ಮತಾಂತರಗೊಳಿಸಲಾಗಿದೆ. ಈ ಬಗ್ಗೆ ಬಾಲಕನ ಕುಟುಂಬಸ್ಥರು ಮೂರು ಬಾರಿ ಪೊಲೀಸರಿಗೆ ದೂರು ನೀಡಿದರೂ ದೂರು ದಾಖಲಾಗಿರಲಿಲ್ಲ ಎಂದು ಬಜರಂಗದಳದ ಪ್ರಾಂತ ವಿದ್ಯಾರತಿ ಪ್ರಮುಖ್ ಪ್ರಿನ್ಸ್ರಾಜ್ ಶ್ರೀವಾಸ್ತವ ಅವರು ಎಂದು ಆರೋಪಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ