ಕೇರಳ ಪ್ರವಾಹ: ನಿರಾಶ್ರಿತರ ಕೇಂದ್ರದಲ್ಲಿರುವಾಗಲೇ ನಡೆಯಿತು ಮದುವೆ!
ಮಲಪ್ಪುರಂನ ಅಂಜು ಮತ್ತು ಸಾಜು ಎಂಬ ಜೋಡಿ ನಿರಾಶ್ರಿತರ ಕೇಂದ್ರದಲ್ಲಿರುವಾಗಲೇ ಹಸೆಮಣೆಗೆ ಏರಿದೆ. ಅದೂ ಸಮೀಪದ ದೇವಾಲಯವೊಂದರಲ್ಲಿ. ಆ ಮದುವೆಗೆ ನಿರಾಶ್ರಿತರ ಕೇಂದ್ರದಲ್ಲಿದ್ದವರೇ ಬಂಧುಗಳಾಗಿ ಸಾಕ್ಷಿಯಾದರು.
ಮೂರು ದಿನಗಳಿಂದ ಈ ಜೋಡಿ ಇಲ್ಲಿನ ಶಾಲೆಯೊಂದರಲ್ಲಿ ನಿರಾಶ್ರಿತರ ಕೇಂದ್ರದಲ್ಲಿ ಆಶ್ರಯ ಪಡೆದಿತ್ತು. ಮಳೆಯಿಂದಾಗಿ ಮದುವೆ ಮುಂದೂಡುವ ಯೋಚನೆಯಲ್ಲಿದ್ದ ಜೋಡಿಗೆ ನಿರಾಶ್ರಿತರ ಕೇಂದ್ರದಲ್ಲಿದ್ದ ಸದಸ್ಯರ ಉತ್ತೇಜನ ಸಿಕ್ಕಿತು. ಹೀಗಾಗಿ ಅಲ್ಲಿದ್ದ ತಮ್ಮ ಬಂಧುಗಳ ಸಾಕ್ಷಿಯಾಗಿ ಇಬ್ಬರೂ ಸಮೀಪದ ದೇವಾಲಯದಲ್ಲಿ ಸರಳವಾಗಿ ಮದುವೆಯಾದರು.