ಬೃಹತ್ ಗುಡ್ಡ ಕುಸಿತ: ಕಂಗಾಲಾದ ಜನರು

ಭಾನುವಾರ, 19 ಆಗಸ್ಟ್ 2018 (18:57 IST)
ನಿರಂತರವಾಗಿ ಸುರಿಯುತ್ತಿರುವ ಮಳೆ ರಾಜ್ಯದ ಕೆಲವು ಜಿಲ್ಲೆಗಳ ಜನರನ್ನು ಇನ್ನಿಲ್ಲದಂತೆ ಹೈರಾಣು ಮಾಡಿದೆ. ಏತನ್ಮಧ್ಯೆ ಅಲ್ಲಲ್ಲಿ ಗುಡ್ಡಗಳು ಕುಸಿಯುತ್ತಿವೆ. ರಸ್ತೆ ಸಂಚಾರ ವ್ಯತ್ಯಯಗೊಳ್ಳುತ್ತಿರುವುದು ಜನರನ್ನು ಇನ್ನಷ್ಟು ಚಿಂತೆಗೆ ಈಡುಮಾಡಿದೆ.

ಕಾಫಿ ನಾಡು ಚಿಕ್ಕಮಗಳೂರಿನಲ್ಲಿಯೂ ಮಳೆ ನಿಲ್ಲುವ ಲಕ್ಷಣಗಳು ಸಧ್ಯಕ್ಕೆ ಗೋಚರಿಸುತ್ತಿಲ್ಲ. ಧಾರಾಕಾರ ಮಳೆಯು ಸುರಿಯುತ್ತಿರುವ ಕಾರಣ ಜನಜೀವನ ತೀವ್ರ ಸಂಕಷ್ಟಕ್ಕೆ ಒಳಗಾಗಿದೆ. ಕೊಡಗಿನಲ್ಲಿ ಮಳೆಯ ಅಬ್ಬರ ರೌದ್ರಾವತಾರ ತಾಳಿದರೆ, ಚಿಕ್ಕಮಗಳೂರಿನಲ್ಲಿಯೂ ಮಳೆ ತನ್ನ ಪ್ರತಾಪ ತೋರುತ್ತಿದೆ. ಹಲವೆಡೆ ಗುಡ್ಡಗಳು ಕುಸಿಯುತ್ತಿರುವ ಪ್ರಕರಣಗಳು ವರದಿಯಾಗುತ್ತಿವೆ. ಹೀಗಾಗಿ ಜನರು ಮತ್ತಷ್ಟು ಭಯದಲ್ಲಿ ಕಾಲಕಳೆಯುವಂತಾಗಿದೆ.

ಕೊಪ್ಪ ತಾಲೂಕಿನ 3 ಕಡೆಗಳಲ್ಲಿ ಮನೆಗಳ ಮೇಲೆ ಗುಡ್ಡ ಕುಸಿದಿದ್ದು, ಪರಿಹಾರ ಕಾರ್ಯಾಚರಣೆ ಮುಂದುವರಿದಿದೆ. ಪ್ರವಾಹ ಪೀಡಿತರನ್ನು ಗಂಜಿ ಕೇಂದ್ರಗಳಲ್ಲಿ ರಕ್ಷಣೆ ಮಾಡಲಾಗುತ್ತಿದೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ