ಮಳೆಯ ರೆಡ್ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ

ಮಂಗಳವಾರ, 4 ಜುಲೈ 2023 (08:26 IST)
ಕರ್ನಾಟಕದ 4 ಜಿಲ್ಲೆಗಳಲ್ಲಿ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದ್ದು, ರೆಡ್ ಅಲರ್ಟ್ ಘೋಷಿಸಲಾಗಿದೆ.
 
ಜುಲೈ 6 ರಂದು ಚಿಕ್ಕಮಗಳೂರು, ಹಾಸನ, ಕೊಡಗು, ಶಿವಮೊಗ್ಗ ಜಿಲ್ಲೆಗಳಿಗೆ ರೆಡ್ ಅಲರ್ಟ್ ಘೊಷಿಸಲಾಗಿದೆ. ಚಾಮರಾಜನಗರ, ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಿಸಲಾಗಿದೆ.

ಬೆಳಗಾವಿ, ಧಾರವಾಡ, ಹಾವೇರಿ, ಬಳ್ಳಾರಿ, ಮಂಡ್ಯ, ತುಮಕೂರು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಕಾರವಾರ ಹಾಗೂ ಕಾರ್ಕಳದಲ್ಲಿ ಅಧಿಕ ಮಳೆಯಾಗಿದೆ, ಕೋಟ, ಮಂಕಿ, ಬಿಳಿಕೇರಿ, ಕ್ಯಾಸಲ್ರಾಕ್, ಶಿರಾಲಿ, ಧರ್ಮಸ್ಥಳ, ಮಂಗಳೂರು, ಪಣಂಬೂರು, ಗೇರುಸೊಪ್ಪ, ಗೋಕರ್ಣ, ಕದ್ರ, ಬೆಳ್ತಂಗಡಿ, ಪುತ್ತೂರು, ಕೊಲ್ಲೂರು, ಹೊನ್ನಾವರ, ಕುಂದಾಪುರ, ಅಂಕೋಲ, ಯಲ್ಲಾಪುರ, ಕೊಪ್ಪ, ಸಕಲೇಶಪುರ, ತಾಳಗುಪ್ಪ, ಚಿಂತಾಮಣಿ, ಸುಳ್ಯ, ಉಪ್ಪಿನಂಗಡಿ, ಸಿದ್ದಾಪುರ, ಮಂಚಿಕೆರೆ, ಕಿರವತ್ತಿ, ನಾಪೋಕ್ಲು, ಸುಂಟಿಕೊಪ್ಪ, ವಿರಾಜಪೇಟೆ, ಸೋಮವಾರಪೇಟೆ, ಪೊನ್ನಂಪೇಟೆ, ಲಿಂಗನಮಕ್ಕಿ, ಹುಂಚದಕಟ್ಟೆ, ತ್ಯಾಗರ್ತಿ, ಕಳಸ, ಕೃಷ್ಣರಾಜಸಾಗರದಲ್ಲಿ ಮಳೆಯಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ