ಬೆಂಗಳೂರು : ರಾಜಧಾನಿ ಸೇರಿ ಇಡೀ ರಾಜ್ಯ ಚಳಿಗಾಳಿಗೆ ತತ್ತರಿಸಿದೆ. ಕಳೆದ ರಾತ್ರಿ ಬೆಂಗಳೂರಿನಲ್ಲಿ ಕನಿಷ್ಠ ತಾಪಮಾನ 13 ಡಿಗ್ರಿ ಸೆಲ್ಸಿಯಸ್ಗೆ ಇಳಿದಿದೆ.
ಇದು ಕಳೆದ 10 ವರ್ಷಗಳಲ್ಲಿಯೇ ನವೆಂಬರ್ ತಿಂಗಳಲ್ಲಿ ದಾಖಲಾದ ಕನಿಷ್ಠ ತಾಪಮಾನ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಬಿಸಿಲು ಮೈತಾಕುವುದೇ ಕಡಿಮೆಯಾಗಿದ್ದು, ಚಳಿಗಾಳಿಯ ಪ್ರಮಾಣ ಹೆಚ್ಚುತ್ತಿದೆ. ಜನ ಚಳಿಗಾಲದ ಉಡುಪುಗಳ ಮೊರೆ ಹೋಗ್ತಿದ್ದಾರೆ. ಚುಮುಚುಮು ಚಳಿ ಜೊತೆಗೆ ಹಗುರ ಮಳೆ ಬೀಳುವ ಸುಳಿವನ್ನು ಹವಾಮಾನ ಇಲಾಖೆ ನೀಡಿದೆ.
ಇಂದು ಗರಿಷ್ಠ ಉಷ್ಣಾಂಶ 26 ಮತ್ತು ಕನಿಷ್ಠ ಉಷ್ಣಾಂಶ 16 ಡಿಗ್ರಿ ಸೆಲ್ಸಿಯಸ್ಗೆ ತಲುಪುವ ಸಾಧ್ಯತೆಯಿದ್ದು, ಮುಂದಿನ 48 ಗಂಟೆಗಳು ಬೆಂಗಳೂರು ನಗರದಲ್ಲಿ ಸಾಮಾನ್ಯವಾಗಿ ಮೋಡ ಕವಿದ ವಾತಾವರಣವಿರುತ್ತದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.